ಬೆಂಗಳೂರು: ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಆದೇಶದಲ್ಲಿ ರಾಜ್ಯದ ಎ ಗುಂಪಿನ ಅಧಿಕಾರಿಗಳು ಐಎಎಸ್ ಹುದ್ದೆಗಳಿಗೆ ಬಡ್ತಿ ಪಡೆಯಲು ಇನ್ನು ಮುಂದೆ ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಹೌದು, ರಾಜ್ಯದ ಎ ಗುಂಪಿನ ಅಧಿಕಾರಿಗಳು ಐಎಎಸ್ ಹುದ್ದೆಗಳಿಗೆ ಬಡ್ತಿ ಪಡೆಯಲು ಇನ್ನು ಮುಂದೆ ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ್ದು, ವ್ಯಕ್ತಿ ಆಧಾರಿತ ಶಿಫಾರಸಿನ ಹಾವಳಿ ತಪ್ಪಿಸಲು ಮತ್ತು ಉತ್ತಮ ಆಡಳಿತಾಧಿಕಾರಿಗಳಿಗೆ ಸುಗಮ ವೇದಿಕೆ ಸಿಗಲಿ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಇನ್ನು, ಈ ಪರೀಕ್ಷೆಯನ್ನು ಕೆಪಿಎಸ್ ಸಿ ನಡೆಸಲಿದ್ದು, ಇದರಲ್ಲಿ ಭ್ರಷ್ಟಾಚಾರ, ವ್ಯಕ್ತಿಯ ಪ್ರಾಬಲ್ಯ ನಡೆಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.