ಬೆಂಗಳೂರು : ಜಮೀನು ಸರ್ವೇ ಶುಲ್ಕವನ್ನು ಹೆಚ್ಚಿಸಿ ಇತ್ತೀಚೆಗೆ ಆದೇಶಿಸಿದ್ದ ಸರ್ಕಾರ, ಹಳೆ ಆದೇಶ ಹಿಂಪಡೆದು, ಮರು ಪರಿಷ್ಕರಿಸಿ, ಹೊಸ ಆದೇಶವನ್ನು ಹೊರಡಿಸಿದೆ.
ಹೌದು, ಗ್ರಾಮೀಣ ಪ್ರದೇಶದ 2 ಎಕರೆ ಭೂಮಿಗೆ 1500 ರೂ. ನಿಗದಿಪಡಿಸಲಾಗಿದ್ದು, ಹೆಚ್ಚುವರಿ ಭೂಮಿಗೆ ಪ್ರತೀ ಎಕರೆಗೆ 400 ರೂ.ನಂತೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂತೆಯೇ ನಗರ ಪ್ರದೇಶದಲ್ಲಿ 2 ಎಕರೆಗೆ 2500 ರೂ., ಅದಕ್ಕಿಂತ ಹೆಚ್ಚಿದ್ದರೆ ಪ್ರತೀ ಎಕರೆಗೆ 1000 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಹಿಂದಿನ ಆದೇಶದಲ್ಲಿ, ಆಡಳಿತಾತ್ಮಕ ವೆಚ್ಚ, ನಿರ್ವಹಣ ವೆಚ್ಚ, ಭೂ ಮಾಪಕರ ಶುಲ್ಕದಲ್ಲಿ ಹತ್ತು ಪಟ್ಟಿನಿಂದ ನೂರು ಪಟ್ಟಿನಷ್ಟು ಏರಿಕೆ ಮಾಡಿ ಫೆಬ್ರುವರಿ 1 ರಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ದರ ಏರಿಕೆಯನ್ನು ಖಂಡಿಸಿದ ಭೂ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆ, ಹಳೆಯ ಆದೇಶ ಹಿಂಪಡೆದು ಮರು ಪರಿಷ್ಕರಿಸಿ, ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.