ಇಂದು ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿಯ ಪೂಜೆ; ಕಾತ್ಯಾಯಿನಿ ದೇವಿಯ ಆರಾಧಕರಾಗಿದ್ದ ಶ್ರೀ ರಾಮ, ಶ್ರೀ ಕೃಷ್ಣ

Katyayini devi : ಇಂದು ನವರಾತ್ರಿ 6ನೇ ದಿನ. ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಇಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ, ದೇವಿಯು ಆದಾಯ, ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.…

Katyayini devi

Katyayini devi : ಇಂದು ನವರಾತ್ರಿ 6ನೇ ದಿನ. ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಇಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ, ದೇವಿಯು ಆದಾಯ, ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.

ಪೂಜಾ ವಿಧಾನ-ಸಂಧ್ಯಾಕಾಲ ಕಾತ್ಯಾಯಿನಿ ಆರಾಧನೆಗೆ ಸೂಕ್ತ. ಧೂಪ, ದೀಪ ಹಚ್ಚಿ..ಹಳದಿ ಹೂವುಗಳಿಂದ ಮಾತೃದೇವತೆಯನ್ನು ಪೂಜಿಸಿ. ನಂತರ ನೈವೇದ್ಯವನ್ನು ಅರ್ಪಿಸಿ. ಕೊನೆಗೆ ದೇವಿ ಮುಂದೆ ಕುಳಿತು ಪ್ರಾರ್ಥಿಸಿ. ಇಂದಿನ ಬಣ್ಣ: ಹಸಿರು

ಇದನ್ನೂ ಓದಿ: ಇಂದು ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಆರಾಧನೆ; ಈ ತಪ್ಪುಗಳನ್ನು ಮಾಡಲೇಬಾರದು

Vijayaprabha Mobile App free

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ ಮಾಡಲಾಗುತ್ತದೆ. ಕಾತ್ಯಾಯಿನಿ ದೇವಿ ದುರ್ಗಾದೇವಿಯ ಉಗ್ರ ಯೋಧ ಅವತಾರವಾಗಿದ್ದು, ಮಹಿಷಾಸುರನ ಸಂಹಾರಕ್ಕಾಗಿ ಅವತರಿಸಿದಳು. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ.

ಈ ಅವತಾರದಲ್ಲಿ ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗವನ್ನು ತನ್ನ ಕೈಗಳಲ್ಲಿ ಹಿಡಿದಿದ್ದಾಳೆ. ಕಾತ್ಯಾಯಿನಿ ದೇವಿಯ ಪೂಜೆ ಮಾಡುವುದರಿಂದ ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ದೇವಿಯ ಆರಾಧಕರಿಗೆ ಭಯ ದೂರವಾಗಿ ಧೈರ್ಯ ಮತ್ತು ವಿಶ್ವಾಸ ಮೂಡುತ್ತದೆ.

ಇದನ್ನೂ ಓದಿ: kushmanda devi : ಇಂದು ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ

ಕಾತ್ಯಾಯಿನಿ ದೇವಿಯನ್ನು ಮಹಿಷಾಸುರಮರ್ದಿನಿ ಎಂದೂ ಕರೆಯಲಾಗುತ್ತದೆ

Katyayini devi
Katyayini devi

ಕಾತ್ಯಾಯಿನಿ ದೇವಿಯು ನವರಾತ್ರಿಯ ಆರನೇ ದಿನದ ದೇವಿ. ಆಕೆಯ ಹೆಸರು ಕಾತ್ಯ ಋಷಿಯ ಗೋತ್ರದಿಂದ ಬಂದಿದೆ. ಕಾತ್ಯ ಋಷಿಯು ತಮ್ಮ ತೀವ್ರ ತಪಸ್ಸಿನ ಪರಿಣಾಮವಾಗಿ ದೇವಿಯನ್ನು ಮಗಳಾಗಿ ಪಡೆದರು.

ಕಾತ್ಯಾಯಿನಿ ಜನಿಸುವ ಮುನ್ನ ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಬಹಳಷ್ಟು ಹೆಚ್ಚಾಗಿತ್ತು. ದಶಮಿಯ ದಿನದಂದು ಕಾತ್ಯಾಯಿನಿಯು ಮಹಿಷಾಸುರನೊಂದಿಗೆ ಯುದ್ಧ ಮಾಡಿ ಅವನನ್ನು ಸಂಹಾರ ಮಾಡಿದಳು. ಇದಾದ ನಂತರ ದೇವಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು ಎಂದು ಪುರಾಣದ ಕಥೆಗಳು ಹೇಳುತ್ತವೆ.

ಇದನ್ನೂ ಓದಿ:  Nitya panchanga | ಇಂದು ಜ್ಯೇಷ್ಠ ನಕ್ಷತ್ರ; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ ಇಲ್ಲಿದೆ

ಶ್ರೀ ರಾಮ, ಕೃಷ್ಣ ಇಬ್ಬರೂ ಕಾತ್ಯಾಯಿನಿ ದೇವಿಯ ಆರಾಧಕರಾಗಿದ್ದರು

Katyayani Avatars
Katyayani Avatars

ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು ಎಂದು ಪುರಾಣಗಳು ಹೇಳುತ್ತವೆ. ಶ್ರೀಕೃಷ್ಣನನ್ನು ಪಡೆಯಲು ಬ್ರಜ್ ನ ಗೋಪಿಗಳು ದೇವಿಯ ಆರನೇ ರೂಪವಾದ ಕಾತ್ಯಾಯಿನಿಯನ್ನು ಪೂಜಿಸಿದರು ಎಂಬ ದಂತಕಥೆಯಿದೆ. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಿದೆ. ತಾಯಿ ಕಾತ್ಯಾಯಿನಿಯನ್ನು ನವರಾತ್ರಿಯಲ್ಲಿ ಪೂಜಿಸುವುದರಿಂದ ಪುಣ್ಯ ಫಲಗಳು ದುಪ್ಪಟ್ಟಾಗುತ್ತದೆ. ಶಕ್ತಿ, ಧೈರ್ಯ ಮತ್ತು ಯಶಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ.

ಈ ಕಾರಣಕ್ಕಾಗಿ ಕಾತ್ಯಾಯಿನಿ ದೇವಿಯ ಪೂಜೆಯನ್ನು ಮಾಡಬೇಕು

ಕಾತ್ಯಾಯಿನಿ ದೇವಿಯ ಪೂಜೆಯನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ಮುಖ್ಯವಾಗಿ, ವಿವಾಹದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಮೃದ್ಧಿ ಹಾಗೂ ಸಂತೋಷ ಪಡೆಯಲು ಮಾಡಲಾಗುತ್ತದೆ.

ಕಾತ್ಯಾಯಿನಿ ದೇವಿ ದುರ್ಗೆಯ ಒಂದು ರೂಪವಾಗಿದ್ದು, ಅವಳನ್ನು ಪೂಜಿಸುವುದರಿಂದ ಶಕ್ತಿ, ಸಾಹಸ, ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನಂಬಲಾಗಿದೆ. ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ದೇವಿಯ ಆರಾಧನೆ ಮಾಡುವುದರಿಂದ ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನಗಳೇನು ಗೊತ್ತೇ?

ಕಾತ್ಯಾಯಿನಿ ದೇವಿ ಪೂಜೆಯು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಪೂಜೆಯನ್ನು ನವರಾತ್ರಿಯ ಆರನೇ ದಿನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಪೂಜೆಯು ಆಯುಷ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ. ದೇವಿಯ ಕೃಪೆಯಿಂದ ಭಕ್ತರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ದೊರೆಯುತ್ತದೆ. ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಭಕ್ತರಿಗೆ ಶಾಂತಿ ಮತ್ತು ಸಮೃದ್ಧಿ ದೊರೆಯುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.