ನಿಮ್ಮ ಹತ್ತಿರ ಫೋನ್ ಇದೆಯೇ? ನೀವು ಅದನ್ನು ಪ್ರತಿ ತಿಂಗಳು ರೀಚಾರ್ಜ್ ಮಾಡಿಸುತ್ತೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗೆ ಒಂದು ಒಳ್ಳೆಯ ಆಫರ್ ಲಭ್ಯವಿದೆ. ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಹೊಸ ಸೇವೆಗಳನ್ನು ಲಭ್ಯಗೊಳಿಸಿದೆ.
ವೊಡಾಫೋನ್ ಐಡಿಯಾ ಇತ್ತೀಚೆಗೆ ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಇದರ ಭಾಗವಾಗಿ, ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 51 ರೂ ಒಂದು ಯೋಜನೆ, ಮತ್ತೊಂದು 301 ರೂ ಯೋಜನೆ . ಈ ಯೋಜನೆಗಳ ಮೂಲಕ ರೀ ಚಾರ್ಜ್ ಮಾಡುವ ಮೂಲಕ ನೀವು ಆರೋಗ್ಯ ವಿಮಾ ಪ್ರಯೋಜನಗಳನ್ನು ಪಡೆಯಬಹುದು.
ಈ ವಿಮಾ ಪಾಲಿಸಿಯು ಕೋವಿಡ್ 19 ಸೇರಿದಂತೆ ಇತರ ಕಾಯಿಲೆಗಳಿಗೆ ಅನ್ವಯಿಸುತ್ತದೆ. ವೈದ್ಯಕೀಯ ತುರ್ತುಸ್ಥಿತಿ ಹೊಂದಿರುವ ಆಸ್ಪತ್ರೆಗೆ ದಾಖಲಾದರೆ ದಿನಕ್ಕೆ ರೂ .1,000 ಸಿಗುತ್ತದೆ. ಹೀಗೆ ಹತ್ತು ದಿನಗಳು ಸಿಗುತ್ತದೆ. ಅದೇ ಐಸಿಯುಗೆ ಸೇರಿದರೆ ದಿನಕ್ಕೆ 2,000 ರೂ. ನೀಡುತ್ತಾರೆ. ಈ ಪ್ರಯೋಜನಗಳು 18 ರಿಂದ 55 ವರ್ಷದೊಳಗಿನ ಜನರಿಗೆ ಅನ್ವಯಿಸುತ್ತವೆ.
51 ರೂ ಯೋಜನೆ ಆಡ್-ಆನ್ ಯೋಜನೆಯಾಗಿದ್ದು, ಇದರರ್ಥ ನಿಮ್ಮ ಪ್ರಸ್ತುತ ಯೋಜನೆಯೊಂದಿಗೆ 51 ರೂಗಳಿಗೆ ರೀಚಾರ್ಜ್ ಮಾಡಿದರೆ, ನಿಮಗೆ ವಿಮಾ ಸೌಲಭ್ಯಗಳು ಸಿಗುತ್ತವೆ. ಇದರ ವ್ಯಾಲಿಡಿಟಿ 28 ದಿನಗಳು. ಇನ್ನು 301 ರೂ. ಪ್ರಿಪೇಯ್ಡ್ ಯೋಜಯಾಗಿದ್ದು, 28 ದಿನಗಳವರೆಗೆ ವ್ಯಾಲಿಡಿಟಿ ಇರುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಸಿಗುತ್ತದೆ. ಉಚಿತ ಕರೆ ಮತ್ತು 2 ಜಿಬಿ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನುಸಹ ಪಡೆಯಬಹುದು.
ಇದನ್ನು ಓದಿ: LPG ಬಳಕೆದಾರರರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ