ಬಾಲಸುಬ್ರಹ್ಮಣ್ಯಂ ‘ಮರು ಜನ್ಮವಿದ್ದರೆ ನಾನು ಕನ್ನಡ ನಾಡಲ್ಲೇ ಹುಟ್ಟುವೆ’ ಎಂದು ಹೇಳಿದ ವಿಡಿಯೋ ವೈರಲ್..!

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ, ಗಾನಗಾರುಡಿಗ, ನಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇಂದು ನಿಧನ ಹೊಂದಿದ್ದಾರೆ. ನಟ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಪವನ್ ಕಲ್ಯಾಣ್, ಸಲ್ಮಾನ್ ಖಾನ್, ಚಾಲೆಂಜಿಂಗ್ ಸ್ಟಾರ್ ಧರ್ಶನ್, ನವರಸ…

SP Balasubramaniam

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ, ಗಾನಗಾರುಡಿಗ, ನಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇಂದು ನಿಧನ ಹೊಂದಿದ್ದಾರೆ. ನಟ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಪವನ್ ಕಲ್ಯಾಣ್, ಸಲ್ಮಾನ್ ಖಾನ್, ಚಾಲೆಂಜಿಂಗ್ ಸ್ಟಾರ್ ಧರ್ಶನ್, ನವರಸ ನಾಯಕ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಮತ್ತು ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 2019ರ ನ.1ರಂದು ಇಡೀ ಕರುನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದ ವಿಶೇಷ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಸದ್ಯ ವೈರಲ್ ಆಗುತ್ತಿದೆ.

ಹೌದು, ಕನ್ನಡಿಗರು ನನ್ನನ್ನು ದತ್ತು ಪಡೆದಿದ್ದಾರೆ. ನಾನೂ ಕೂಡ ಕನ್ನಡಿಗರನ್ನು ಹಾಗೂ ಕನ್ನಡ ನಾಡನ್ನು ಅಗಾಧವಾಗಿ ಪ್ರೀತಿಸುತ್ತೇನೆ ಎಂದರೆ ಅದು ಅತಿಶಯೋಕ್ತಿಯಲ್ಲ. ಮರು ಜನ್ಮ ಇದ್ದರೆ ನಾನು ಕನ್ನಡಿಗನಾಗಿ ಹುಟ್ಟಲು ಬಯಸುವೆ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಈಗ ಅವರ ನಿಧನದ ನಂತರ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Vijayaprabha Mobile App free

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹೇಳಿದ ವಿಡಿಯೋ ಲಿಂಕ್ ಕೆಳಗೆ ಕೊಟ್ಟಿದೆ.

https://www.youtube.com/watch?v=QjomhzGy194&feature=youtu.be

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.