Pralhad Joshi | ಅಂಗವಿಕಲರ ನಿಧಿಯನ್ನೂ ಬಿಡುತ್ತಿಲ್ಲ; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗ ಅಂಗವಿಕಲರ ನಿಧಿಯನ್ನೂ ಬಿಡುತ್ತಿಲ್ಲ. ಅದಕ್ಕೂ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಕಿಡಿ ಆರೋಪಿಸಿದ್ದಾರೆ. ರಾಜ್ಯದ ಜನಕ್ಕೆ ಐದು ಗ್ಯಾರಂಟಿಗಳ ಆಶ್ವಾಸನೆ…

Union Minister Pralhad Joshi alleges against the state government

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗ ಅಂಗವಿಕಲರ ನಿಧಿಯನ್ನೂ ಬಿಡುತ್ತಿಲ್ಲ. ಅದಕ್ಕೂ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಕಿಡಿ ಆರೋಪಿಸಿದ್ದಾರೆ.

ರಾಜ್ಯದ ಜನಕ್ಕೆ ಐದು ಗ್ಯಾರಂಟಿಗಳ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೀಗ ಒಂದೊಂದೇ ಇಲಾಖೆಗಳ ಅನುದಾನವನ್ನು ಕಿತ್ತುಕೊಳ್ಳುತ್ತಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ. ಸರ್ಕಾರ, ಅಂಗವಿಕಲರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದ್ದ ಅನುದಾನವನ್ನು ಶೇ.80ರಷ್ಟು ಕಡಿತಗೊಳಿಸಿ ವಿಕಲಚೇತನರ ನಿಧಿಗೆ (Disabled Fund) ಕನ್ನ ಹಾಕಿದೆ ಎಂದು ಸಚಿವರು ಆರೋಪಿಸಿದ್ದಾರೆ.

2023-24ರಲ್ಲಿ 53 ಕೋಟಿ ರೂಪಾಯಿ ನೀಡುತ್ತಿದ್ದರೆ, ಈಗದನ್ನು ಕೇವಲ 10 ಕೋಟಿಗೆ ಇಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಿವ್ಯಾಂಗರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ ಎಂದು ಸಚಿವರು ದೂರಿದ್ದಾರೆ. ವಿಕಲಚೇತನರ ಸಬಲತೆಗೆ ಕೇಂದ್ರದ ಪರಿಶ್ರಮ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ವಿಕಲಚೇತನರ ಸಬಲತೆಗೆ ಶ್ರಮಿಸುತ್ತಿದೆ. ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನೂ ಸಾಮಾನ್ಯರಂತೆ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದ್ದಾರೆ.

Vijayaprabha Mobile App free

ಇದನ್ನೂ ಓದಿ: ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷತೆಗೆ 100 ವರ್ಷ: ವಾರ್ಷಿಕೋತ್ಸವ ಆಚರಿಸಲು ರಾಜ್ಯ ಸರ್ಕಾರದ ಸಿದ್ಧತೆ

ಮೋದಿ ಸರ್ಕಾರ ಭಾರತದಲ್ಲಿ ದಿವ್ಯಾಂಗರ ಜೀವನ ಸುಲಭವಾಗಿಸಲು ನಿರಂತರ ಶ್ರಮಿಸುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅವರ ಅನುದಾನಕ್ಕೂ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ ಜೋಶಿ. ಕೇಂದ್ರ ಸರ್ಕಾರ 90ಕ್ಕೂ ಅಧಿಕ ವಿಮಾನ ನಿಲ್ದಾಣ, 700ಕ್ಕೂ ಅಧಿಕ ರೈಲು ನಿಲ್ದಾಣಗಳು ಮತ್ತು 1700ಕ್ಕು ಹೆಚ್ಚು ಸರ್ಕಾರಿ ಕಟ್ಟಡಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.

29 ಲಕ್ಷ ದಿವ್ಯಾಂಗರಿಗೆ ಉಪಕರಣ

17000 ಶಿಬಿರಗಳ ಮೂಲಕ 29 ಲಕ್ಷ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಗಿದೆ. ವಂದೇ ಭಾರತ್ ರೈಲುಗಳಲ್ಲಿ ಬಾಗಿಲು, ಶೌಚಾಲಯಗಳನ್ನು ದಿವ್ಯಾಂಗರಿಗಾಗಿ ಸುಧಾರಿಸಲಾಗಿದೆ ಎಂದು ಹೇಳಿದ್ದಾರೆ.

1.1 ಕೋಟಿ UDID ಕಾರ್ಡ್

ದೇಶದಲ್ಲಿ 1.1 ಕೋಟಿ UDID ಕಾರ್ಡ್‌ಗಳ ಮೂಲಕ ದಿವ್ಯಾಂಗ ಸಮುದಾಯಕ್ಕೆ ಕೇಂದ್ರದ ವಿವಿಧ ಯೋಜನೆಗಳ ಲಾಭಗಳನ್ನು ತಲುಪಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Cyclone Fengal : ಫೆಂಗಲ್ ಎಫೆಕ್ಟ್ ರಾಜ್ಯದಲ್ಲೂ ವರುಣಾರ್ಭಟ; ಮುಂದಿನ ಮೂರೂ ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.