Tomato price : ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಕೆ ಬಳಿಕ ಈಗ ಟೊಮೆಟೊ ದರ ಏರಿಕೆಯಾಗಿದೆ.
ಹೌದು, ಕಳೆದ ವಾರ ಕೆಜಿಗೆ 40ರೂ. ಇದ್ದ ದರ ಈಗ ದುಪ್ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80ರೂಗೆ ಮಾರಾಟವಾಗುತ್ತಿದೆ. ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕುಸಿತಗೊಂಡಿದೆ. ಜೊತೆ ನವರಾತ್ರಿ ಆರಂಭಗೊಂಡಿದ್ದು, ಬೇಡಿಕೆ ಜಾಸ್ತಿ ಇದ್ದು, ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 8 ಜಿಲ್ಲೆಗಳಲ್ಲಿ ಭಾರೀ ಮಳೆ; ಅಲ್ಲೋಲ-ಕಲ್ಲೋಲ – ಯೆಲ್ಲೋ ಅಲರ್ಟ್ ಘೋಷಣೆ
Tomato price : ಕೆ.ಜಿ ಟೊಮೆಟೊ ಬೆಲೆ 100 ರೂ!
ಟೊಮೆಟೊ ಬೆಲೆ ಮತ್ತೆ ಗಗನಕ್ಕೇರಿದ್ದು, ಕೆಲವು ದಿನಗಳ ಹಿಂದಿನವರೆಗೆ ಕೆಜಿಗೆ 80 ರೂ.ಇದ್ದದ್ದು ಈಗ 100 ರೂ.ಗೆ ತಲುಪಿದೆ. 20 ದಿನಗಳ ಹಿಂದೆ ಕೆಜಿಗೆ 30 ರಿಂದ 40 ರೂ.ಗೆ ಮಾರಾಟವಾಗುತ್ತಿದ್ದು, ಐದು ದಿನಗಳ ಹಿಂದೆ 60 ರೂ. ಈಗ ಸಗಟು ವ್ಯಾಪಾರಿಗಳು ಕೆಜಿಗೆ 80 ರೂ.ಗೆ ಮಾರಾಟ ಮಾಡುತ್ತಿದ್ದರೆ.. ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ 100 ರೂಗೆ ಮಾರಾಟ ಮಾಡುತ್ತಿದ್ದಾರೆ.