ಮಿಲನಾ ನಾಗರಾಜ್ ಅವರು ತಾಯಿ ಆಗಿದ್ದಾರೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ.
ಮಿಲನಾ ನಾಗರಾಜ್ ಅವರಿಗೆ ಜನಿಸಿದ್ದು ಹೆಣ್ಣು ಮಗು. ಈ ವಿಚಾರವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಮಗು ಹಾಗೂ ತಾಯಿಯ ಆರೋಗ್ಯ ಉತ್ತಮವಾಗಿದೆ ಎಂದು ಡಾರ್ಲಿಂಗ್ ಕೃಷ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮಿಲನಾ ನಾಗರಾಜ್ ಅವರನ್ನು ಡಾರ್ಲಿಂಗ್ ಕೃಷ್ಣ ಅವರು ಹೊಗಳಿದ್ದಾರೆ. ಅದೇ ರೀತಿ ಮಗಳು ಹುಟ್ಟಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರಿಗೆ ಸಾಕಷ್ಟು ಖುಷಿ ಆಗಿದೆ. ಹೆಣ್ಣು ಮಗು ಜನಿಸಬೇಕು ಎಂದು ಅವರ ಆಸೆ ಆಗಿತ್ತಂತೆ. ಈ ಆಸೆ ಈಡೇರಿದೆ.
ಮಿಲನಾ ಅವರ ಕೈಯಲ್ಲಿ ಸದ್ಯ ಯಾವುದೇ ಹೊಸ ಸಿನಿಮಾ ಇಲ್ಲ. ಅವರು ಮಗುವಿನ ಆರೈಕೆಯಲ್ಲಿ ಕೆಲ ವರ್ಷ ಬ್ಯುಸಿ ಆಗಲಿದ್ದಾರೆ. ಆ ಬಳಿಕೆ ಅವರು ನಟನೆಗೆ ಕಂಬ್ಯಾಕ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಮಿಲನಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಾ ಇದ್ದಾರೆ. ಮಗುವಿನ ಮುಖ ನೋಡಲು ಫ್ಯಾನ್ಸ್ ಕಾದಿದ್ದಾರೆ.