PM Kisan : ಕೇಂದ್ರ ಸರ್ಕಾರವು ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana ) 18ನೇ ಕಂತಿಗೆ ಹಣ ಇಂದು ಬಿಡುಗಡೆ ಆಗಲಿದೆ. ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗಳಿಗೆ 2 ಸಾವಿರ ರೂ. ಜಮಾ ಆಗಲಿದೆ.
ಹೌದು, ಕೃಷಿಕರಿಗೆ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಎಂ ಕಿಸಾನ್ ಯೋಜನೆಯ ಮೂಲಕ ಅರ್ಹ ರೈತರಿಗೆ ವರ್ಷಕ್ಕೆ 3 ಕಂತುಗಳಲ್ಲಿ ಸರ್ಕಾರವು 2000 ರೂಪಾಯಿಯಂತೆ ವಾರ್ಷಿಕ ₹6,000 ನೀಡುತ್ತದೆ.ಇವರಿಗೆ ಈ ಯೋಜನೆಯಲ್ಲಿ ಈ ವರೆಗೆ 17 ಕಂತಿನ ಹಣ ಬಿಡುಗಡೆಯಾಗಿದೆ. ಅದರಂತೆ ಮುಂಬರುವ 18ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂದು ಎದುರು ನೋಡುತ್ತಿದ್ದ ರೈತರ ಇದೀಗ ಹಣ ಬಿಡುಗಡೆಯಾಗಲಿದೆ.
ಇದನ್ನೂ ಓದಿ: India vs new zealand : ಭಾರತದ ವನಿತೆಯರಿಂದ ಬ್ಯಾಟಿಂಗ್ ವೈಫಲ್ಯ; ಕಿವಿಸ್ ಎದುರು 58 ರನ್‌ನಿಂದ ಸೋಲು
PM Kisan money: ಇಂದೇ ರೈತರ ಖಾತೆಗೆ ₹2,000

ಹೌದು, ಅ.5ರಂದು (ಇಂದು) ಮಹಾರಾಷ್ಟ್ರದ ವಾಶಿಮ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಹಣ ಜಮಾಕ್ಕೆ ಚಾಲನೆ ನೀಡಲಿದ್ದು, ರೈತರ ಖಾತೆಗೆ ಹಣ 2000 ರೂ. ಜಮಾ ಆಗಲಿದ್ದು, ಈ ಪ್ರಯೋಜನವನ್ನು ಪಡೆಯಲು ಅನ್ನದಾತರು ಇಕೆವೈಸಿಗೆ ಒಳಗಾಗಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದು, ಇ-ಕೆವೈಸಿ ಮಾಡಿದರೆ ಮಾತ್ರ ನಿಮಗೆ ಹಣ ಸಿಗುತ್ತದೆ.
ದೇಶದಾತ್ಯಂತ ಸುಮಾರು 9.4 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಜಮಾ ಅಗಲಿದ್ದು, ಕೇಂದ್ರದಿಂದ ಪಿಎಂ ಕಿಸಾನ್ ಫಲಾನುಭವಿಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಎಕ್ಸ್.ಕಾಂನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ಮಾರ್ಟಿನ್ ಸಿನಿಮಾ: ದ್ರುವ ಸರ್ಜಾಗೆ ಬಹುಪರಾಕ್ ಹೇಳಿದ ಅಪ್ಪು ಅಭಿಮಾನಿಗಳು
PM Kisan E-KYC : E-KYC ಮಾಡುವುದು ಹೇಗೆ?
- E-KYC ಮಾಡಿಸಲು ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ಗೆ ಭೇಟಿ ನೀಡಿ.
- ನಂತರ e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿಆಧಾರ್ ಸಂಖ್ಯೆ ನಮೂದಿಸಿ, ‘ಸರ್ಚ್’ ಬಟನ್ (Search button) ಮೇಲೆ ಒತ್ತಿರಿ.
- ನಂತರ OTP ಸಹಾಯದಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಇದನ್ನೂ ಓದಿ: Gruhalakshmi yojana : ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ; ಈ ದಿನದಂದು 2 ತಿಂಗಳ ₹4000 ಹಣ ಜಮಾ!
PM Kisan status : ರೈತರ ಖಾತೆಗೆ ₹2,000; ಪರಿಶೀಲಿಸುವುದು ಹೇಗೆ?
- ಪಿಎಂ ಕಿಸಾನ್ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ನೋಡಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ( https://pmkisan.gov.in/ ) ಭೇಟಿ ನೀಡಿ
- ನಂತರ ಫಲಾನುಭವಿ ಸ್ಥಿತಿ (Beneficiary Status) ಪುಟಕ್ಕೆ ಹೋಗಲು “ಫಲಾನುಭವಿ ಸ್ಥಿತಿ” ಆಯ್ಕೆಯನ್ನು ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಡೇಟಾ ಪಡೆಯಿರಿ” (Get data)ಕ್ಲಿಕ್ ಮಾಡಿ.
- ಈಗ ನೀವು ಫಲಾನುಭವಿಯೇ ಸ್ಥಿತಿಯನ್ನು ನೋಡಬಹುದಾಗಿದ್ದು, ನಿಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು.




