Jaya Ekadashi : ಜಯ ಏಕಾದಶಿಯನ್ನು ಮೋಕ್ಷದ ಹೆಬ್ಬಾಗಿಲು ಎ೦ದು ಕೂಡ ಕರೆಯಲಾಗುತ್ತದೆ. ಈ ದಿನ ಉಪವಾಸ ಹಾಗೂ ಪೂಜೆ ಮಾಡುವುದರಿಂದ ಜನನ ಮತ್ತು ಮರಣದ ಚಕ್ರಗಳಿ೦ದ ಮುಕ್ತಿ ಪಡೆಯಬಹುದು. ಅಲ್ಲದೇ, ಇದು ಪುನರ್ಜನ್ಮದ ಬಂಧಗಳಿಂದ ಮತ್ತು ಅತೃಪ್ತ ಆತ್ಮಗಳಿಂದ ಸಹ ಮುಕ್ತಿ ದೊರಕಿಸುತ್ತದೆ.
ವಿಷ್ಣು ಪೂಜೆ
ಈ ದಿನ ಬೇಗ ಎದ್ದು ತಣ್ಣೀರಲ್ಲಿ ಸ್ನಾನ ಮಾಡಬೇಕು. ನಂತರ ಮರದ ಹಲಗೆಯ ಮೇಲೆ ವಿಷ್ಣು, ಕೃಷ್ಣ ಮತ್ತು ಲಕ್ಷ್ಮಿ ದೇವಿಯ ಮೂರ್ತಿಗಳನ್ನು ಇಡಬೇಕು. ದೇವರಿಗೆ ತುಪ್ಪದ ದೀಪಗಳನ್ನ ಹಚ್ಚಿ ಹೂ, ತುಳಸಿ ಎಲೆಗಳು ಮತ್ತು ನೈವೇದ್ಯವನ್ನು ಅರ್ಪಣೆ ಮಾಡಬೇಕು.
ಮಂತ್ರ ಪಠಣೆ
ಪೂಜೆಯ ಸಮಯದಲ್ಲಿ ವಿಷ್ಣುವಿನ ಮಂತ್ರಗಳನ್ನು ತಪ್ಪದೆ ಪಠಿಸಬೇಕು. ಹಾಗೂ ಓಂ ನಮೋ ಭಗವತೇ ವಾಸುದೇವಯೇ ಶ್ಲೋಕವನ್ನು ಸುಮಾರು 108 ಬಾರಿ ಜಪಿಸುವುದು ಮ೦ಗಳಕರವಾಗಿದೆ. ಜೊತೆಗೆ ಈ ದಿನದ ಏಕಾದಶಿಯ ಕಥೆಯನ್ನು ತಪ್ಪದೇ ಕೇಳಬೇಕು.
ಉಪವಾಸ
ಜಯ ಏಕಾದಶಿ ಉಪವಾಸವನ್ನು ಭಕ್ತಿಯಿ೦ದ ಆಚರಿಸುವುದರಿಂದ ಆಧ್ಯಾತ್ಮಿಕ ಶುದ್ದೀಕರಣ ಮತ್ತು ಹಿಂದಿನ ಪಾಪಗಳಿಗೆ ಕ್ಷಮೆಯನ್ನು ಪಡೆಯಬಹುದು. ಏಕಾದಶಿಯ ಹಿಂದಿನ ದಿನ ಅಂದರೆ ದಶಮಿಯ ಸೂರ್ಯಾಸ್ತದಿಂದ ದ್ವಾದಶಿಯ ಸೂರ್ಯೋದಯದವರೆಗೆ ಉಪವಾಸವನ್ನು ಮಾಡಬೇಕು.
ಏನು ಮಾಡಬಾರದು
- ತುಳಸಿ ಎಲೆಯಲ್ಲಿ ಲಕ್ಷ್ಮಿಯ ಸಾನಿಧ್ಯ ಇರುವುದರಿಂದ ಈ ದಿನ ತಪ್ಪಿಯೂ ತುಳಸಿ ಎಲೆಗಳನ್ನ ಕೀಳಬಾರದು.
- ಏಕಾದಶಿಯ ಹಿಂದಿನ ದಿನ ಮಾಂಸ, ಮೀನು, ಈರುಳ್ಳಿ, ಉದ್ದಿನಬೇಳೆ & ಜೇನುತುಪ್ಪದಂತಹ ಆಹಾರವನ್ನು ಸೇವಿಸಬಾರದು.
- ಈ ದಿನ ಕೂದಲು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ.