Google Pay Scratch Card: ಇತ್ತೀಚಿನ ದಿನಗಳಲ್ಲಿ ಗೂಗಲ್ ಪೇ (Google Pay) ಮತ್ತು ಫೋನ್ ಪೇ ಬಳಸದವರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷವಾಗಿ Google Pay ವಹಿವಾಟುಗಳಲ್ಲಿ ಕ್ಯಾಶ್‌ಬ್ಯಾಕ್ ಬಹುಮಾನಗಳು ಬರುತ್ತವೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ Google Pay ಆರಂಭವಾದ ದಿನಗಳಲ್ಲಿ 10, 20, 50 ರೂ.ಗಳ ಕ್ಯಾಶ್ ಬ್ಯಾಕ್ (cashback) ಸಿಗುತ್ತಿತ್ತು. ನಂತರ ಅದು ಬರುಬರುತ್ತ ಬಹುತೇಕ ಕಣ್ಮರೆಯಾಗುಟ್ಟ ಹೋಯಿತು. ಈಗ ಕೆಲವು ರಿಯಾಯಿತಿಗಳು ಬರುತ್ತಿವೆ. ಆದರೆ ಇದೀಗ ಗೂಗಲ್ ಪೇನಲ್ಲಿನ ತಾಂತ್ರಿಕ ದೋಷ ಬಳಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಬಳಕೆದಾರರಿಗೆ ತಪ್ಪಾಗಿ Google Pay ಖಾತೆಗಳಿಗೆ ಹಣ ಜಮಾ (ಕ್ರೆಡಿಟ್) ಮಾಡಲಾಗಿದೆ. ಇದರಿಂದ ಹಣ ಸಿಕ್ಕಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ
Google Payನಲ್ಲಿ ದೋಷ.. ಖಾತೆಗೆ ₹87 ಸಾವಿರ!
GPay ನಲ್ಲಿನ ದೋಷದಿಂದಾಗಿ ಕೆಲವು Pixel ಫೋನ್ ಬಳಕೆದಾರರು ಭಾರೀ ಕ್ಯಾಶ್‌ಬ್ಯಾಕ್ ಪಡೆದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. 16ರಲ್ಲಿ 10 ವಹಿವಾಟುಗಳಿಗೆ ಕ್ಯಾಶ್‌ಬ್ಯಾಕ್ ಸಿಕ್ಕಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಬರೆದುಕೊಂಡಿದ್ದಾರೆ. ಕೆಲವರು 100, 240 ಡಾಲರ್, ಮತ್ತೆ ಕೆಲವರು ಒಮ್ಮೆಗೆ 1072 ಡಾಲರ್ (₹87862) ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ದೋಷ ಅರಿತು GPay ಅದನ್ನು ಸರಿಪಡಿಸಿದೆ. ಭಾರತದಲ್ಲಿ UPI, ಅಮೆರಿಕದಲ್ಲಿ wallet ರೂಪದಲ್ಲಿ Gpay ಸೇವೆ ಸಲ್ಲಿಸುತ್ತಿದೆ.
ಇದು 10 ರಿಂದ 1000 ಅಮೆರಿಕನ್ ಡಾಲರ್ (Dollars) ವ್ಯಾಪ್ತಿಯಲ್ಲಿದೆ. 1000 ಡಾಲರ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 80 ಸಾವಿರ ರೂಪಾಯಿಗಳಿಗಿಂತ ಹೆಚ್ಚು. ಆದರೆ, ಇಂತಹ ತಾಂತ್ರಿಕ ದೋಷಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಆದರೆ ಹೆಚ್ಚಿನ ಬಳಕೆದಾರರು ಕೆಲವೇ ಸಮಯದಲ್ಲಿ ನಿರಾಶೆಗೊಂಡಿದ್ದಾರೆ. ತಪ್ಪಾಗಿ ಖಾತೆಗಳಿಗೆ ಹಣ ಜಮಾ ಆಗುತ್ತಿರುವುದನ್ನು ಮನಗಂಡ ಆಡಳಿತ ಮಂಡಳಿ ಈ ಸಮಸ್ಯೆ ಬಗೆಹರಿಸಿದೆ.
ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಅದೇ ಕ್ರಮದಲ್ಲಿ ಖಾತೆಗಳಿಗೆ ಜಮೆಯಾದ ಹಣವನ್ನು ಸಾಧ್ಯವಾದಷ್ಟು ಹಿಂಪಡೆಯಲಾಗಿದೆ. ಇದು ಎಲ್ಲರಿಗೂ ಅನ್ವಯಿಸದೇ ಇರಬಹುದು. ಆದರೆ, ಇನ್ನು ಕೆಲವರು ತಮ್ಮ ಖಾತೆಯಲ್ಲಿ ಜಮೆಯಾದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ಖರ್ಚು ಮಾಡಿದ್ದು, Google Pay ಅವರಿಗೆ ಇಲ್ಲಿ ಏನು ಮಾಡಲು ಸಾಧ್ಯವಾಗಲ್ಲ. ಹಣ ಅವರಿಗೆ ಸೇರಿದ್ದು ಎಂದು ಡಿಕ್ಲೇರ್ ಮಾಡಿದ್ದರಂದ, ಅವರಿಂದ ಯಾವುದೇ ಹಣ ಸಂಗ್ರಹಿಸುವುದಿಲ್ಲ ಎಂದು ಘೋಷಿಸಿದೆ.
ಇದನ್ನು ಓದಿ: Aadhaar card ಹೊಂದಿರುವವರಿಗೆ ಎಚ್ಚರಿಕೆ; ಇಂತಹ ಆಧಾರ್ ಕಾರ್ಡ್ ರದ್ದು, ಕೇಂದ್ರದ ಪ್ರಮುಖ ನಿರ್ಧಾರ!
ಇಲ್ಲಿ ಜಮಾ ಆದ ಹಣವು ಕ್ಯಾಶ್‌ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್‌ಗಳ ( Scratch Card )ರೂಪದಲ್ಲಿಯೂ ಬಂದಿದೆಯಂತೆ. ಈಗ ಸ್ಕ್ರ್ಯಾಚ್ ಕಾರ್ಡ್ ಗೀಚಿದ ಹಲವು ಮಂದಿಗೆ 800ರಿಂದ 80 ಸಾವಿರ ರೂ ಬಂದಿದ್ದು, ಇದರಿಂದ ಬಳಕೆದಾರರು ಶಾಕ್ ಆಗಿದ್ದಾರೆ. ಇದರಿಂದ ಬೇಗ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಇನ್ನು,ಪತ್ರಕರ್ತರೊಬ್ಬರು ತಮ್ಮ ಟ್ವಿಟರ್‌ನಲ್ಲಿ ಗೂಗಲ್ ಪೇ ತಾಂತ್ರಿಕ ದೋಷದ ಬಗ್ಗೆ ಮೊದಲು ಪೋಸ್ಟ್ ಮಾಡಿದ್ದು, 46 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ರೂ.3700 ಸಿಕ್ಕಿದೆ ಎಂದರು.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!