ಪ್ರಪಂಚಾದ್ಯಂತ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆಯಿದ್ದು, ಒಂದು ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣದ ಮೂಲಕ ಅದರ ಆರ್ಥಿಕ ಸದೃಢತೆಯು ಪರಿಗಣಿಸಲ್ಪಡುತ್ತದೆ.
ಸತತ ನಾಲ್ಕು ದಿನ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆಕಂಡಿದ್ದು, 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆಯಲ್ಲಿ ₹390 ಇಳಿಕೆಯಾಗಿದ್ದು, ₹55,450 ಆಗಿದೆ. 24 ಕ್ಯಾರೆಟ್‌ನ ಚಿನ್ನದ ದರ ₹430 ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ₹60,480ಗೆ ಮಾರಾಟವಾಗುತ್ತಿದ್ದು, ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದ್ದು, ₹80,000 ಆಗಿದೆ.
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ
ಇನ್ನು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇದೆ ಬೆಲೆ ಇರಲಿದ್ದು, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,390, ರೂ. 55,790, ರೂ. 55,790 ಆಗಿದೆ.
ಕಡಿಮೆಯಾಯ್ತು ಚಿನ್ನದ ಆಮದು!
2022-23ರ ಹಣಕಾಸು ವರ್ಷದ ಏಪ್ರಿಲ್-ಫೆಬ್ರವರಿ ನಡುವೆ ಚಿನ್ನದ ಆಮದು 31.8 ಶತಕೋಟಿ ಡಾಲರ್‌ಗಳಿಗೆ (30 ಪ್ರತಿಶತದಷ್ಟು) ಕಡಿಮೆಯಾಗಿದೆ ಎಂದು ವಾಣಿಜ್ಯ ಸಚಿವಾಲಯ ಬಹಿರಂಗಪಡಿಸಿದೆ.
ಹೆಚ್ಚಿನ ಕಸ್ಟಮ್ಸ್ ಸುಂಕ ಮತ್ತು ಅಂತರಾಷ್ಟ್ರೀಯ ಅನಿಶ್ಚಿತತೆ ಇದಕ್ಕೆ ಮುಖ್ಯ ಕಾರಣ. ಮತ್ತೊಂದೆಡೆ, ಬೆಳ್ಳಿ ಆಮದು ಶೇಕಡಾ 66 ರಷ್ಟು ಏರಿಕೆಯಾಗಿ 5.3 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2021-22 ರ ಇದೇ ಅವಧಿಯಲ್ಲಿ, ಚಿನ್ನದ ಆಮದು 45.2 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು.