India vs new zealand : ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (ICC Womens T20 World Cup 2024) ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 58 ರನ್‌ನಿಂದ ಸೋಲುಂಡಿದೆ.
ಹೌದು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 160 ರನ್ ಗಳಿಸಿತು. ಕಿವೀಸ್ ಪರ ಬೇಟ್ಸ್ 27 ರನ್, ಪ್ಲಿಮ್ಮರ್ 34 ರನ್, ಎಸ್ ಡಿವೈನ್ 57 ರನ್ ಗಳ ಕೊಡುಗೆ ನೀಡಿದರು. ಇನ್ನು, ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 2 ವಿಕೆಟ್, ಅರುಂಧತಿ ರೆಡ್ಡಿ ಹಾಗು ಆಶಾ ಸೋಭಾನ ತಲಾ ಒಂದು ವಿಕೆಟ್ ಪಡೆದರು
ಇದನ್ನೂ ಓದಿ: ಎಕ್ಸ್.ಕಾಂನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ಮಾರ್ಟಿನ್ ಸಿನಿಮಾ: ದ್ರುವ ಸರ್ಜಾಗೆ ಬಹುಪರಾಕ್ ಹೇಳಿದ ಅಪ್ಪು ಅಭಿಮಾನಿಗಳು
India vs new zealand : ಭಾರತದ ವನಿತೆಯರಿಂದ ಬ್ಯಾಟಿಂಗ್ ವೈಫಲ್ಯ; ಟೀಮ್ ಇಂಡಿಯಾಗೆ ಆರಂಭಿಕ ಸೋಲು
ಕಿವೀಸ್ ನೀಡಿದ 161 ರನ್‌ಗಳ ಗುರಿ ಹಿಂಬಾಲಿಸಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ 102 ರನ್‌ಗಳಿಗೆ ಸರ್ವಪತನ ಕಂಡಿತು. ಹರ್ಮನ್ ಪ್ರೀತ್ ಕೇವಲ 15 ರನ್ ಗಳಿಸಿದ ಅಗ್ರ ಸ್ಕೋರರ್ ಎಂಬುದು ಗಮನಾರ್ಹ. ಉಳಿದಂತೆ ಭಾರತದ ಪರ ಸ್ಮೃತಿ ಮಂಧಾನ 12, ಶಫಾಲಿ ವರ್ಮಾ 2, ರೊಡ್ರಿಗ್ಸ್ 13, ರಿಚಾ ಘೋಷ್ 12, ದೀಪ್ತಿ ಶರ್ಮಾ 13 ರನ್‌ಗಳ ಕೊಡುಗೆ ನೀಡಿದರು. ಕಿವೀಸ್ ಪರ ಬೌಲರ್‌ಗಳಾದ ರೋಸ್ಮೆರಿ ಮೈರ್ 4, ಲೀ ತಾಹುಹು 3, ಈಡನ್ ಕಾರ್ಸನ್ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: PM Kisan : ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ; ನಾಳೆಯೇ ರೈತರ ಖಾತೆಗೆ ₹2,000..!?
ಇನ್ನು, ಕಿವೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕಿ ಸೋಫಿ ಡಿವೈನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.