Saraswati Puja : ಇಂದು ಸರಸ್ವತಿ ದೇವಿಯ (Goddess Saraswati) ಜನ್ಮದಿನ. ಸರಸ್ವತಿ ದೇವಿಯು ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನಿಂದ ರಚಿಸಲ್ಪಟ್ಟವಳು. ಅಲ್ಲದೆ ದೇವಿ ಭಾಗವತದ ಪ್ರಕಾರ ಬ್ರಹ್ಮ ದೇವರ ಪತ್ನಿಯಾಗಿದ್ದಾಳೆ. ಆಕೆಯ ಜನನವನ್ನು ಸ್ಮರಿಸುವ ದಿನವೇ ನವರಾತ್ರಿಯ ವಸಂತ ಪಂಚಮಿ. ಸರಸ್ವತಿ ದೇವಿಗೆ ಶಾರದೆ, ಸಾವಿತ್ರಿ ದೇವಿ ಮತ್ತು ಗಾಯತ್ರಿ ದೇವಿ ಸೇರಿದಂತೆ ಹಲವು ಹೆಸರುಗಳಿವೆ.
ಅಕ್ಷರಾಭ್ಯಾಸಕ್ಕೆ ಪ್ರಶಸ್ತ ದಿನ
ಮಕ್ಕಳಿಗೆ ವಿದ್ಯಾರಂಭದ ಶಾಸ್ತ್ರ ನಡೆಸಲು ಈ ದಿನ ಪ್ರಶಸ್ತವಾಗಿದೆ. ಇನ್ನೂ ವಿದ್ಯಾಭ್ಯಾಸ ಪ್ರಾರಂಭಿಸದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ಅಲ್ಲದೆ ಮನೆಯಲ್ಲಿ ಓದುವ ಮಕ್ಕಳಿದ್ದರೆ ಸರಸ್ವತಿ ಪೂಜೆ ಮಾಡುವುದರಿಂದ ಸರಸ್ವತಿ ಕೃಪೆಯಿಂದ ಅವರ ಕಲಿಕೆಗೆ ಒಳಿತಾಗಲಿದೆ. ಜೊತೆಗೆ ಮನೆಯಲ್ಲಿ ಶಾರದ ದೇವಿಯ ಪೂಜೆ ಮಾಡುವುದರಿಂದ ಜ್ಞಾನರ್ಜಾನೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ನವರಾತ್ರಿ ಮುಗಿಯುವ ಮುನ್ನ ಈ ವಸ್ತುಗಳನ್ನು ತಪ್ಪದೆ ಮನೆಗೆ ತನ್ನಿ!
ಪೂಜೆಯ ದಿನಗಳು
- ನವರಾತ್ರಿಯ ಕೊನೆಯ ಮೂರು ಅಥವಾ ಐದು
- ದಿನಗಳ ಕಾಲ ಶಾರದೆಯನ್ನು ಪೂಜಿಸಲಾಗುವುದು.
- ಸರಸ್ವತಿಯ ಸ್ಥಾಪನೆ – ಅ.9 (ನಿನ್ನೆ)
- ಸರಸ್ವತಿಯ ಪೂಜಾ ದಿನಗಳು- ಅ. 10, 11 ಮತ್ತು 12
- ಸರಸ್ವತಿಯ ವಿಸರ್ಜನೆ –
- ವಿಜಯ ದಶಮಿಯಂದು ಅ. 13
ಪೂಜಾ ವಿಧಾನ – ಪ್ರತಿಷ್ಠಾಪನೆ
ಮೊದಲಿಗೆ ಮನೆಯನ್ನು ಸ್ವಚ್ಛಗೊಳಿಸಿ ಬಳಿಕ ಸರಸ್ವತಿ ದೇವಿಯ ಫೋಟೊವನ್ನು ಇಟ್ಟು ಹೂಗಳಿಂದ ಸಿಂಗರಿಸಬೇಕು. ಶಾರದೆಯ ಮೂರ್ತಿಯ ಸ್ಥಾಪನೆ ಕೂಡ ಮಾಡಬಹುದು. ಧರ್ಮಗ್ರಂಥಗಳು ಸೇರಿದಂತೆ ಓದುವ ಪುಸ್ತಕಗಳನ್ನು ಪೂಜೆಗೆ ಇಡಬೇಕು. ಸರಸ್ವತಿ ದೇವಿಯನ್ನು ಆವಾಹಿಸಬೇಕು.
ಇದನ್ನೂ ಓದಿ: ಇಂದು ನವರಾತ್ರಿ ಏಳನೇ ದಿನ ಕಾಳರಾತ್ರಿ ಸ್ವರೂಪ: ಪೂಜೆ ವಿಧಾನ, ಮಹತ್ವ
ಪೂಜಾ ವಿಧಾನ – ಪೂಜೆ, ನೈವೇದ್ಯ
ಮೊದಲಿಗೆ ಗಣೇಶನಿಗೆ ಪೂಜೆ ಮಾಡಿ, ಬಳಿಕ ದೇವಿ ಸರಸ್ವತಿಯನ್ನು ಪೂಜಿಸಿಬೇಕು. ಸರಸ್ವತಿಗೆ ಹೂವು, ಹಣ್ಣುಗಳು, ಸಿಹಿತಿ೦ಡಿಯನ್ನು ಅರ್ಪಿಸಬೇಕು. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ! ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ!! ಎ೦ಬ ಮಂತ್ರದೊಂದಿಗೆ ಆರಂಭಿಸಿ ದೇವಿಯ ಇತರ ಮಂತ್ರಗಳನ್ನು ಪಠಿಸುತ್ತಾ ಪೂಜಿಸಬೇಕು.
ಪೂಜಾ ವಿಧಾನ – ವಿಸರ್ಜನೆ
3 ದಿನಗಳ ಕಾಲ ದೇವಿಗೆ ನೈವೇದ್ಯ, ಮಂತ್ರ ಪಠಣ ಮತ್ತು ಪೂಜೆಗಳನ್ನು ಅರ್ಪಿಸಿ ಜ್ಞಾನಾರ್ಜನೆಗೆ ದೇವಿಯಲ್ಲಿ ಪ್ರಾರ್ಥಿಸಿಕೊಂಡು ಬಳಿಕ ವಿಜಯದಶಮಿಯಂದು ವಿಸರ್ಜಿಸಬೇಕು. ಮೂರ್ತಿಯನ್ನು ಸ್ಥಾಪಿಸಿದ್ದರೆ ಶಾಸ್ತೋಕ್ತವಾಗಿ ವಿಸರ್ಜನೆ ಮಾಡಬೇಕು. ಪೂಜೆಯ ಮೊದಲ ದಿನ ಇಟ್ಟ ಪುಸ್ತಕಗಳನ್ನು ಈ ದಿನ ತೆಗೆದು ಅಧ್ಯಯನ ಮಾಡಬೇಕು, ವಿಸರ್ಜನೆಯ ಮುನ್ನ ಅದರ ಅಧ್ಯಯನ ನಿಷಿದ್ಧವಾಗಿದೆ.