ಬೆಂಗಳೂರು: ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ ಎಂದು ಕೇಂದ್ರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಆಧುನಿಕ ಕೃಷಿ ಇಂದು ರೈತನ ಅನಿವಾರ್ಯತೆಯಾಗಿದ್ದು, ರಸಗೊಬ್ಬರ ಹಾಗೂ ಕೀಟನಾಶಕ ಬಳಸದೇ ಒಂದು ಹಿಡಿ ಭತ್ತ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಆದರೆ ಕೇಂದ್ರದ ಕೆಟ್ಟ ನಿರ್ಧಾರಗಳಿಂದ ರಸಗೊಬ್ಬರದ ಬೆಲೆಯೂ ಏರಿದೆ. ಈಗಾಗಲೇ ಮಾರಕ ಕೃಷಿ ಕಾಯ್ದೆಯಿಂದ ಬೀದಿಗೆ ಬಿದ್ದಿರುವ ರೈತ ರಸಗೊಬ್ಬರಕ್ಕೆ ದುಬಾರಿ ಬೆಲೆ ತೆತ್ತು ಕೃಷಿ ಮಾಡಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದ್ದಾರೆ
ಕೊರೊನಾ ಸಾಂಕ್ರಾಮಿಕಕ್ಕಿಂತಲೂ ಈ ಬೆಲೆಯೇರಿಕೆ ಸಾಂಕ್ರಾಮಿಕ ಅಪಾಯಕಾರಿಯಾಗಿ ವ್ಯಾಪಿಸುತ್ತಿದೆ. ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ. ಬೆಲೆಯೇರಿಕೆ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಕೇಂದ್ರ ಸರ್ಕಾರ ಜನರನ್ನು ಹೊಟ್ಟೆಗಿಲ್ಲದೆ ಸಾಯುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.
1
ಆಧುನಿಕ ಕೃಷಿ ಇಂದು ರೈತನ ಅನಿವಾರ್ಯತೆಯಾಗಿದೆ.
ರಸಗೊಬ್ಬರ ಹಾಗೂ ಕೀಟನಾಶಕ ಬಳಸದೇ ಒಂದು ಹಿಡಿ ಭತ್ತ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ.ಆದರೆ ಕೇಂದ್ರದ ಕೆಟ್ಟ ನಿರ್ಧಾರಗಳಿಂದ ರಸಗೊಬ್ಬರದ ಬೆಲೆಯೂ ಏರಿದೆ.
ಈಗಾಗಲೇ ಮಾರಕ ಕೃಷಿ ಕಾಯ್ದೆಯಿಂದ ಬೀದಿಗೆ ಬಿದ್ದಿರುವ ರೈತ ರಸಗೊಬ್ಬರಕ್ಕೆ ದುಬಾರಿ ಬೆಲೆ ತೆತ್ತು ಕೃಷಿ ಮಾಡಲು ಹೇಗೆ ಸಾಧ್? pic.twitter.com/xLUNLG0csu
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 8, 2021