Cow farming : ನಾಟಿ ಹಸುಗಳ ಸಾಕಾಣಿಕೆ ಕಡಿಮೆಯಾಗಲು ಕಾರಣವೇನು? ಗುಣ ಲಕ್ಷಣಗಳು ಹೇಗಿರುತ್ತವೆ?

Cow farming : ಈಗಿನ ಆಧುನಿಕ ಜೀವನದಲ್ಲಿ ನಾಟಿ ಹಸುಗಳ ಸಾಕಾಣಿಕೆ (farming of nati cows) ಕಡಿಮೆಯಾಗಲು ಕಾರಣವೇನು ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ ಹೌದು, ನಾಟಿ ತಳಿಗಳಲ್ಲಿ ಹಾಲಿನ ಇಳುವರಿ ಬಹಳ…

Nati Cow Farming

Cow farming : ಈಗಿನ ಆಧುನಿಕ ಜೀವನದಲ್ಲಿ ನಾಟಿ ಹಸುಗಳ ಸಾಕಾಣಿಕೆ (farming of nati cows) ಕಡಿಮೆಯಾಗಲು ಕಾರಣವೇನು ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ

ಹೌದು, ನಾಟಿ ತಳಿಗಳಲ್ಲಿ ಹಾಲಿನ ಇಳುವರಿ ಬಹಳ ಕಡಿಮೆ. ಇವು ದಿನಕ್ಕೆ ಸರಾಸರಿ ಒಂದೂವರೆ ಲೀಟರ್‌ ಹಾಲು ಕರೆಯುತ್ತವೆ. ಇನ್ನು ಕರುವಿನ ಬೆಳವಣಿಗೆಯ ವೇಗ ತುಂಬಾ ಕಡಿಮೆ. ಇವುಗಳು 2/3 ವರ್ಷಕ್ಕೊಮ್ಮೆ ಕರು ಹಾಕುತ್ತವೆ.

ಈ ಹಸುವುಗೆ ಮಾತೃಪ್ರೇಮ ಜಾಸ್ತಿ. ಕರುವೇನಾದರೂ ಸತ್ತು ಹೋದರೆ ಕೆಲವೊಂದು ಹಸು ಹಾಲನ್ನೇ ಕೊಡುವುದಿಲ್ಲ. ಈ ಹಸುಗಳು ಬಹಳ ಚಂಚಲ ಸ್ವಭಾವದವವು. ಒದೆಯುವುದು, ಹಾಯುವುದು ಹೆಚ್ಚು. ಕೆಲವು ಹಸುಗಳ ಹಾಲು ಕರೆಯಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಈ ಕಾರಣದಿಂದಾಗಿಯೇ ನಾಟಿ ಹಸುಗಳ ಸಾಕಾಣೆ ಕಡಿಮೆಯಾಗಿದೆ.

Vijayaprabha Mobile App free

Cow farming : ನಾಟಿ ತಳಿ ಹಸುಗಳ ಗುಣ ಲಕ್ಷಣಗಳು ಹೇಗಿರುತ್ತದೆ?

Nati Cow Farming
Reason for decrease in nati cow farming
  • ನಾಟಿ ತಳಿ ಹಸುಗಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಇವುಗಳಿಗೆ ರೋಗಭಾದೆ ಕಡಿಮೆ.
  • ಇನ್ನು ಕೆಲವು ಮಾರಕ ರೋಗಗಳು ನಾಟಿ ತಳಿಗಳಿಗೆ ಬರುವುದಿಲ್ಲ. ಉಣ್ಣೆ ಕಾಟ ಕೂಡಾ ಕಡಿಮೆ.
  • ಮುಖ್ಯವಾಗಿ ನಾಟಿ ತಳಿಗಳು ಕಳಪೆ ಗುಣಮಟ್ಟದ ಆಹಾರವನ್ನು ಕೂಡಾ ಚೆನ್ನಾಗಿ ಜೀರ್ಣಿಸಿಕೊಳ್ಳುತ್ತವೆ.
  • ಹಾಗೆಯೇ ಇವುಗಳಲ್ಲೊ ಜಂತು ಹುಳುಗಳ ಬಾಧೆ ಕೂಡಾ ಕಡಿಮೆ.
  • ಹವಾಮಾನದ ವೈಪರೀತ್ಯಗಳನ್ನು ಸಾಮಾನ್ಯವಾಗಿ ಸಹಿಸಿಕೊಳ್ಳುತ್ತವೆ. ಹಾಗಾಗಿ ನಾಟಿ ಹಸುಗಳ ನಿರ್ವಹಣೆ ಬಹಳ ಸಲಭವೆನಿಸುತ್ತದೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.