ಪ್ರವಾಸಿಗರಿಲ್ಲದೇ ಹಗಲಲ್ಲಿ ಬೀಕೋ ಎನ್ನುತ್ತಿರುವ ಗೋಕರ್ಣ ಕಡಲತೀರ

ಗೋಕರ್ಣ: ತೀವ್ರ ತಾಪಮಾನ ಏರಿಕೆಯಿಂದಾಗಿ ಪ್ರವಾಸಿ ತಾಣ ಗೋಕರ್ಣದಲ್ಲಿ ಪ್ರವಾಸಿಗರಿಗೆ ತಲೆ ಸುತ್ತುವಂತಾಗಿದೆ. ಬೆಳಿಗ್ಗೆಯಿಂದ ಇಲ್ಲಿಯ ಮುಖ್ಯ ಕಡಲತೀರದಲ್ಲಿ ಜನರಿಲ್ಲದೇ ಬಿಕೋ ಎನ್ನುವಂತಾಗಿದೆ. ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ. ಹೀಗಾಗಿ ಕೆಲವರು ಧಾರ್ಮಿಕ…

ಗೋಕರ್ಣ: ತೀವ್ರ ತಾಪಮಾನ ಏರಿಕೆಯಿಂದಾಗಿ ಪ್ರವಾಸಿ ತಾಣ ಗೋಕರ್ಣದಲ್ಲಿ ಪ್ರವಾಸಿಗರಿಗೆ ತಲೆ ಸುತ್ತುವಂತಾಗಿದೆ. ಬೆಳಿಗ್ಗೆಯಿಂದ ಇಲ್ಲಿಯ ಮುಖ್ಯ ಕಡಲತೀರದಲ್ಲಿ ಜನರಿಲ್ಲದೇ ಬಿಕೋ ಎನ್ನುವಂತಾಗಿದೆ. ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ. ಹೀಗಾಗಿ ಕೆಲವರು ಧಾರ್ಮಿಕ ಕಾರ್ಯಕ್ಕಾಗಿ ಬಂದವರು ಮಾತ್ರ ಅನಿವಾರ್ಯವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಈ ಹಿಂದೆ ಯಾವುದೇ ಸಂದರ್ಭದಲ್ಲಿ ಬಂದರೂ ಕೂಡ ಇಲ್ಲಿ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದರು. ಆದರೆ ಈಗ ತಾಪಮಾನ ಬಾರಿ ಏರಿಕೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹಾಗೇ ಪ್ರವಾಸಕ್ಕೆ ಬಂದರೂ ಕೂಡ ಸಂಜೆಯವರೆಗೂ ಕಡಲತೀರದತ್ತ ಹೆಜ್ಜೆ ಇಡುತ್ತಿಲ್ಲ. ಅಷ್ಟರಮಟ್ಟಿಗೆ ಇಲ್ಲಿಯ ವಾತಾವರಣ ಬಿಸಿಯಾಗಿದೆ.

ಕೆಲವರು ಧಾರ್ಮಿಕ ಕಾರ್ಯಕ್ರಮಕ್ಕೆ ಅನಿವಾರ್ಯವಾಗಿ ಕಡಲತೀರಕ್ಕೆ ತೆರಳುವವರು ಚಪ್ಪಲಿ ಧರಿಸದೇ ಇರುವುದರಿಂದ ನಿಧಾನವಾಗಿ ಹೆಜ್ಜೆ ಹಾಕಲಾಗದೇ ಉಸುಕಿನ ಮೇಲೆ ಓಡುವಂತಾಗಿದೆ. ಇನ್ನು ಗಾಳಿ ಕೂಡ ಬಿಸಿಯಾಗಿ ಇರುವುದರಿಂದ ತೀವೃ ಪ್ರಮಾಣದಲ್ಲಿ ಬೆವರು ಬಂದು ಹೈರಾಣಾಗುವಂತಾಗಿದೆ. ಹೀಗಾಗಿ ಶ್ರೀ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆ ತಕ್ಕಮಟ್ಟಿಗೆ ಇಳಿಮುಖವಾದಂತಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply