Repo rate : ಸತತ 10ನೇ ಬಾರಿಗೆ ರೆಪೊ ದರ ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ಬಿಐ

Repo rate : ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಸತತ ಹತ್ತನೇ ಬಾರಿಗೆ ರೆಪೊ ದರವನ್ನು (Repo rate)  ಶೇ.6.50ರಷ್ಟು ಯಥಾಸ್ಥಿತಿಯಲ್ಲಿ ಇಡುವ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಬುಧವಾರ…

Repo rate

Repo rate : ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಸತತ ಹತ್ತನೇ ಬಾರಿಗೆ ರೆಪೊ ದರವನ್ನು (Repo rate)  ಶೇ.6.50ರಷ್ಟು ಯಥಾಸ್ಥಿತಿಯಲ್ಲಿ ಇಡುವ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಬುಧವಾರ ಪ್ರಕಟಿಸಿದ್ದಾರೆ.

ಹೌದು, ರೆಪೋ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಲಾಗಿದೆ ಎಂದು RBI ಗವರ್ನರ್‌ ಶಕ್ತಿಕಾಂತ್‌ ದಾಸ್ ತಿಳಿಸಿದ್ದು, ರೆಪೋ ರೇಟ್ 6.5%ನಲ್ಲೇ ಇರಲಿದೆ. ರಿವರ್ಸ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. MPC ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅವರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಬಿಗ್ ಶಾಕ್ : ಟೊಮೆಟೊ ದರ ಮತ್ತೆ ಭಾರೀ ಏರಿಕೆ; ಕೆಜಿಗೆ 100ರೂ ತಲುಪಿದ ಟೊಮೆಟೊ!

Vijayaprabha Mobile App free

ಫೆಡರಲ್ ರಿಸರ್ವ್ ಯುಎಸ್‌ನಲ್ಲಿ ಬಡ್ಡಿದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ ನಂತರ ಎಂಪಿಸಿಯ ಮೊದಲ ಸಭೆ ಇದಾಗಿತ್ತು. ಆರ್‌ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೊ ದರ ಎನ್ನಲಾಗುತ್ತದೆ.

ಇನ್ನು, ಕೊನೆಯದಾಗಿ ಕಳೆದ ವರ್ಷ ಫೆ. 8, 2023 ರಂದು ರೆಪೋ, ರಿವರ್ಸ್ ರೆಪೋ ದರ ಹೆಚ್ಚಿಸಲಾಗಿತ್ತು. ಆರ್‌ಬಿಐಯ ಈ ನಿರ್ಧಾರದಿಂದ ಗೃಹ ಸಾಲ ದುಬಾರಿಯಾಗುವುದಿಲ್ಲ. EMI ಸಹ ಹೆಚ್ಚಾಗುವುದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.