BREAKING NEWS: ರಾಜ್ಯದಲ್ಲಿ ವ್ಯಾಕ್ಸಿನೇಷನ್ ಗೊಂದಲ; ರಾಜ್ಯ ಸರ್ಕಾರದಿಂದ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನೇಷನ್ ಗೊಂದಲಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಕೋವಿಡ್ 19 ಲಸಿಕಾಕರಣದ ಕುರಿತು ಸಾರ್ವಜನಿಕರಲ್ಲಿ ಕೆಲವೊಂದು ಗೊಂದಲಗಳಿರುವುದು ಕಂಡುಬಂದಿರುತ್ತದೆ. ಈ ಗೊಂದಲ ನಿವಾರಣೆಗಾಗಿ ರಾಜ್ಯದಲ್ಲಿನ ಸದ್ಯದ ಕೋವಿಡ್ 19 ಲಸಿಕಾಕರಣ ಕುರಿತು…

karnataka vijayaprabha

ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನೇಷನ್ ಗೊಂದಲಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಕೋವಿಡ್ 19 ಲಸಿಕಾಕರಣದ ಕುರಿತು ಸಾರ್ವಜನಿಕರಲ್ಲಿ ಕೆಲವೊಂದು ಗೊಂದಲಗಳಿರುವುದು ಕಂಡುಬಂದಿರುತ್ತದೆ. ಈ ಗೊಂದಲ ನಿವಾರಣೆಗಾಗಿ ರಾಜ್ಯದಲ್ಲಿನ ಸದ್ಯದ ಕೋವಿಡ್ 19 ಲಸಿಕಾಕರಣ ಕುರಿತು ಕೆಲವೊಂದು ಸ್ಫಷ್ಟನೆ ನೀಡಿದೆ.

>> 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ
1.ಕೋವಿಶಿಲ್ಡ್ ಮೊದಲ ಡೋಸ್: ನಗರ ಪ್ರದೇಶಗಳಲ್ಲಿ ಆನ್ ಲೈನ್ & ಗ್ರಾಮೀಣ ಭಾಗದಲ್ಲಿ ಆನ್ ಸೈಟ್ ಮುಖಾಂತರ ನೋಂದಣಿ
2. 2ನೇ ಡೋಸ್: ಹತ್ತಿರದ ಕೋವಿಡ್ ಲಸಿಕಾಕರಣ ಕೇಂದ್ರಕ್ಕೆ ತೆರಳಿ
3.ಕೊವ್ಯಾಕ್ಸಿನ್ ಮೊದಲ ಡೋಸ್: ಸದ್ಯಕ್ಕೆ ಲಭ್ಯವಿಲ್ಲ.
4.ಕೊವ್ಯಾಕ್ಸಿನ್ 2ನೇ ಡೋಸ್: *ಫಲಾನುಭವಿಗಳಿಗೆ sms ಕಲಿಸಲಾಗುತ್ತದೆ.
*sms ನಲ್ಲಿ ತಿಳಿಸಿದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು.

>> 18-44 ವರ್ಷದ ವಯೋಮಾನದವರಿಗೆ ಕೋವಿಡ್ 19 ಲಸಿಕಾಕರಣ

Vijayaprabha Mobile App free

* ಸದ್ಯಕ್ಕೆ ಲಸಿಕೆ ಲಭ್ಯವಿಲ್ಲ.
* ಆದರೆ ರಾಜ್ಯ ಗುರುತಿಸಿರುವ ಕೋವಿಡ್ 19 ಮುಂಚೂಣಿ ಕಾರ್ಯಕರ್ತೆಯರಿಗೆ/ ದುರ್ಬಲ ವರ್ಗದವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕಾಕರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುವುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.