Ravi Pradosh Vrat : ಮಾಘ ಮಾಸದ ಎರಡನೇ ಪ್ರದೋಷ ವ್ರತವು ಭಾನುವಾರದಂದು ಬರುವುದರಿಂದ ಇದನ್ನು ರವಿ ಪ್ರದೋಷ ವ್ರತ ಎಂದು ಕರೆಯುತ್ತಾರೆ. ಪ್ರದೋಷ ವ್ರತ ಆಚರಿಸಲು ಕೆಲವು ನಿಯಮಗಳಿವೆ ಮತ್ತು ಈ ನಿಯಮಗಳನ್ನು ಪಾಲಿಸದಿದ್ದರೆ ಪೂಜೆ ಮತ್ತು ಉಪವಾಸ ಎರಡರ ಫಲವೂ ಸಿಗುವುದಿಲ್ಲ.
ಶಿವಪೂಜೆಯ ಮುಹೂರ್ತ
ಮಾಘ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನಾಂಕ ಫೆ. 9 ರಂದು ಸಂಜೆ 07:25 ಕ್ಕೆ ಪ್ರಾರಂಭವಾಗಿ, ಫೆ. 10 ರಂದು ಸಂಜೆ 06:57 ಕ್ಕೆ ಕೊನೆಗೊಳ್ಳುತ್ತದೆ. ರವಿ ಪ್ರದೋಷ ವ್ರತವನ್ನು ಫೆಬ್ರವರಿ 9, 2025 ರಂದು ಭಾನುವಾರ ಆಚರಿಸಲಾಗುತ್ತದೆ. ಶಿವಪೂಜೆಯ ಮುಹೂರ್ತ ಫೆಬ್ರವರಿ 9 ರಂದು ಸಂಜೆ 7:24 ರಿಂದ 8:42 ರವರೆಗೆ.
ಈ ಕೆಲಸಗಳನ್ನು ಮಾಡಬೇಡಿ
- ಪ್ರದೋಷ ಉಪವಾಸದ ದಿನದಂದು ಸಾತ್ವಿಕ ಆಹಾರ ಮಾತ್ರ ಸೇವಿಸಿ
- ಈ ದಿನ ಯಾವುದೇ ರೀತಿಯ ನಕಾರಾತ್ಮಕ ಆಲೋಚನೆ ಬೇಡ
- ಉಪವಾಸ ಆಚರಿಸುವಾಗ ಉಪ್ಪನ್ನು ಸೇವಿಸಬೇಡಿ. ಹಣ್ಣುಗಳು & ನೀರನ್ನು ಮಾತ್ರ ಸೇವಿಸಿ
ಉಪವಾಸದ ನಿಯಮಗಳು
- ಈ ದಿನ ಮಾಂಸ, ಮೀನು, ಮೊಟ್ಟೆ, ಈರುಳ್ಳಿ & ಬೆಳ್ಳುಳ್ಳಿ ಸೇವಿಸಬೇಡಿ
- ಮದ್ಯ, ಸಿಗರೇಟ್ ಮತ್ತು ಮಾದಕ ವಸ್ತುಗಳಿಂದ ದೂರವಿರಿ
- ಕಪ್ಪು ಬಟ್ಟೆಗಳನ್ನು ಧರಿಸಬೇಡಿ
- ಯಾರನ್ನು ಅವಮಾನಿಸಬೇಡಿ, ಜಗಳವಾಡಬೇಡಿ & ಕೋಪಗೊಳ್ಳಬೇಡಿ
ಉಪವಾಸದ ನಿಯಮಗಳು
ಶಿವಲಿಂಗದ ಮೇಲೆ ಮುರಿದ ಅಕ್ಷತೆ, ಸಿಂಧೂರ, ಅರಿಶಿನ, ತುಳಸಿ, ಕೇದಿಗೆ ಹೂವುಗಳು ಅಥವಾ ತೆಂಗಿನಕಾಯಿಯನ್ನು ಅರ್ಪಿಸಬಾರದು. ಈ ದಿನ ಯಾರಿಗೂ ಸುಳ್ಳು ಹೇಳಬಾರದು