Jaya Ekadashi | ಜಯ ಏಕಾದಶಿ ಶುಭ ಮುಹೂರ್ತ & ಪೂಜಾ ವಿಧಾನ

Jaya Ekadashi : ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಶುಕ್ಲ ಪಕ್ಷ & ಕೃಷ್ಣ ಪಕ್ಷದ ಏಕಾದಶಿ ತಿಥಿಯ೦ದು ವಿಷ್ಣುವನ್ನು ಪೂಜಿಸುವ & ಉಪವಾಸ ಮಾಡುವ ಸಂಪ್ರದಾಯವಿದೆ. ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು…

Jaya Ekadashi Muhurta, Puja Method

Jaya Ekadashi : ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಶುಕ್ಲ ಪಕ್ಷ & ಕೃಷ್ಣ ಪಕ್ಷದ ಏಕಾದಶಿ ತಿಥಿಯ೦ದು ವಿಷ್ಣುವನ್ನು ಪೂಜಿಸುವ & ಉಪವಾಸ ಮಾಡುವ ಸಂಪ್ರದಾಯವಿದೆ. ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು ಶ್ರೀ ಹರಿವಿಷ್ಣುವಿನ ಅನುಗ್ರಹವನ್ನು ಪಡೆಯುವದರಿಂದ ಜೀವನದ ಎಲ್ಲಾ ದುಃಖಗಳು & ತೊಂದರೆಗಳು ದೂರವಾಗುತ್ತವೆ.

Jaya Ekadashi : ಜಯ ಏಕಾದಶಿ ಯಾವಾಗ?

ಹಿಂದೂ ವೈದಿಕ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಶುಕ್ರವಾರ, ಫೆಬ್ರವರಿ 7 ರಂದು ರಾತ್ರಿ 9:26 ಕ್ಕೆ ಪ್ರಾರಂಭವಾಗಿ, ಫೆಬ್ರವರಿ 8 ರ ಶನಿವಾರದ೦ದು ರಾತ್ರಿ 8:15 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಈ ಬಾರಿ ಉಪವಾಸವನ್ನು ಫೆಬ್ರವರಿ 8 ರಂದು ಆಚರಿಸಲಾಗುತ್ತದೆ.

ಪಾರಣಕ್ಕೆ ಶುಭ ಸಮಯ

ಪಂಚಾ೦ಗದ ಪ್ರಕಾರ, ಏಕಾದಶಿ ಉಪವಾಸವನ್ನು ಮರುದಿನ ಅಂದರೆ ದ್ವಾದಶಿ ತಿಥಿಯಲ್ಲಿ ಮುರಿಯಲಾಗುತ್ತದೆ. ಫೆಬ್ರವರಿ 9, ಬೆಳಗ್ಗೆ 7.04ರಿಂದ 917ರವರೆಗೆ ಪಾರಣಕ್ಕೆ ಶುಭ ಮುಹೂರ್ತ ನಡೆಯಲಿದೆ. ಈ ಅವಧಿಯಲ್ಲಿ ಉಪವಾಸವನ್ನು ಮುರಿಯಬಹುದು.

Vijayaprabha Mobile App free

ಜಯ ಏಕಾದಶಿ ಮಹತ್ವ

ಜಯ ಏಕಾದಶಿಯ ಉಪವಾಸವನ್ನು ಭಗವಾನ್ ವಿಷ್ಣು & ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಜೀವನದಿಂದ ರೋಗಗಳು ದೂರವಾಗಿ, ಆರೋಗ್ಯವು ಪ್ರಾಪ್ತಿಯಾಗುತ್ತದೆ. ಅಲ್ಲದೆ, ಈ ಉಪವಾಸವನ್ನು ಆಚರಿಸುವುದರಿಂದ ವ್ಯಕ್ತಿಯು ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ವ್ಯಕ್ತಿಯು ವೈಕುಂಠ ಧಾಮವನ್ನು ಪಡೆಯುತ್ತಾನೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.