Ration Card EKYC : ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ (Ration Card Holder) ಮಹತ್ವದ ಸೂಚನೆ ನೀಡಿದ್ದು, BPL, APL ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ e-KYC ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಇಲಾಖೆ ಸೂಚಿಸಿದೆ.
e-KYC ಅಪ್ಡೇಟ್ ಮಾಡಿಕೊಳ್ಳದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳ ಹಂಚಿಕೆ ಸ್ಥಗಿತಗೊಳಿಸಲಾಗುವುದು ಎಂದಿದ್ದು, ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ e-KYC ಮಾಡಿಕೊಳ್ಳಿ.
ಇದನ್ನೂ ಓದಿ: Pushya Sankashta Chaturthi | ಪುಷ್ಯ ಸಂಕಷ್ಟ ಚತುರ್ಥಿ ಶುಭ ಮುಹೂರ್ತ, ಪೂಜೆ ವಿಧಾನ
Ration Card EKYC : ಜ.31 ರೊಳಗೆ ಇ-ಕೆವೈಸಿ, ಮ್ಯಾಪಿಂಗ್ ಕಡ್ಡಾಯ
ಹೌದು, ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಇಲಾಖೆಯು ತಿಳಿಸಿದೆ. ಜ.31 ರೊಳಗೆ ಇ-ಕೆವೈಸಿ ನವೀಕರಿಸಿಕೊಳ್ಳದ ಪಡಿತರ ಚೀಟಿದಾರರಿಗೆ/ಸದಸ್ಯರಿಗೆ ಮುಂದಿನ ತಿಂಗಳು ಆಹಾರ ಧಾನ್ಯಗಳ ಹಂಚಿಕೆ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.