Charlie Dean : ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಆರಂಭಕ್ಕೂ ಮುನ್ನವೇ RCB ತಂಡದ ಸ್ಟಾರ್ ಆಟಗಾರ್ತಿ ಸೋಫಿ ಮೊಲಿನಿಯಕ್ಸ್ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೊಲಿನಿಯಕ್ಸ್ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿ ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: WPL 2025 ಫೆಬ್ರವರಿ 14 ರಿಂದ ಪ್ರಾರಂಭ; ಈ ನಾಲ್ಕು ಸ್ಥಳಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಯೋಜನೆ
ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಆರಂಭಕ್ಕೂ ಮುನ್ನವೇ ಶಾಕ್ ನಲ್ಲಿದ್ದ RCB ಗೆ ಸೋಫಿ ಮೊಲಿನಿಯಕ್ಸ್ ಸ್ಥಾನದಲ್ಲಿ ಇಂಗ್ಲೆಂಡ್ ಆಟಗಾರ್ತಿ ಚಾರ್ಲಿ ಡೀನ್ (Charlie Dean) ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸೋಫಿ ಮೊಲಿನಿಯಕ್ಸ್ ಅವರ ಸ್ಥಾನಕ್ಕೆ ಚಾರ್ಲಿ ಡೀನ್ ಆಯ್ಕೆಯಾಗಿದ್ದಾರೆ. ಡೀನ್ ಇದುವರೆಗೆ ಇಂಗ್ಲೆಂಡ್ ಪರ 36 ಟಿ20 ಪಂದ್ಯ ಆಡಿದ್ದು ಒಟ್ಟು 46 ವಿಕೆಟ್ ಪಡೆದಿದ್ದಾರೆ.