Ratan Tata : ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು? ಎಂದು ಅವಮಾನಿಸಿದ್ದ ಕಂಪನಿಯನ್ನೇ ಕೇವಲ 2.3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿ ಭಾರಿ ಲಾಭ ಪಡೆದಿದ್ದರು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ (Ratan Tata) ಅವರು.
ಹೌದು, 1998ರಲ್ಲಿ ಭಾರತದಲ್ಲಿ ಟಾಟಾ ಕಂಪನಿಯ ‘ಟಾಟಾ ಇಂಡಿಕಾ’ ಸ್ವದೇಶಿ ಮಾರುಕಟ್ಟೆಗೆ ಪ್ರವೇಶಿಸಿತ್ತು. ಭಾರತೀಯರು ಈ ಕಾರುಗಳನ್ನು ತಿರಸ್ಕರಿಸಿದ್ದರು. ಇದು ರತನ್ ಟಾಟಾ ಅವರಿಗೆ ಎಲ್ಲಿಲ್ಲದ ನೋವು ತಂದಿತ್ತು. ಕಂಪನಿ ಭಾರಿ ನಷ್ಟ ಅನುಭವಿಸುವಂತೆ ಮಾಡಿತ್ತು.
ಇದನ್ನೂ ಓದಿ: Ratan Tata: ಟಾಟಾ ಗ್ರೂಪ್‌ನ ಒಡೆಯ ರತನ್ ಟಾಟಾ ಇನ್ನಿಲ್ಲ!
ಇದರಿಂದಾಗಿ ತಮ್ಮ ವಾಹನ ತಯಾರಿಕೆ ಉದ್ಯಮವನ್ನೇ ಮಾರಾಟ ಮಾಡಲು ರತನ್ ಟಾಟಾ ನಿರ್ಧರಿಸಿದ್ದರು. ಅದರಂತೆ ಅಮೆರಿಕದ ಫೋರ್ಡ್ ಕಂಪನಿಯ ಅಂದಿನ ಮುಖ್ಯಸ್ಥ ಬಿಲ್ ಫೋರ್ಡ್ ಅವರನ್ನು ಭೇಟಿಯಾಗಿ ಅವರಿಗೆ ಮಾರಾಟ ಪ್ರಸ್ತಾಪ ಮುಂದಿಟ್ಟರು.
ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು? ಎಂದು ಅವಮಾನಿಸಿದ್ದ ಕಂಪನಿ
ಫೋರ್ಡ್ ಕಂಪನಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಬಿಲ್ ಫೋರ್ಡ್ ಮತ್ತು ಅವರ ತಂಡ ಅಹಂಕಾರದಿಂದಲೇ ಟಾಟಾ ಪ್ರಯಾಣಿಕ ವಾಹನ ವಿಭಾಗ ಖರೀದಿ ಮಾಡಲು ಮುಂದಾಯಿತು. ಜೊತೆಗೆ ‘ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು?’ ಎಂದು ತುಂಬಾ ಹೀನಾಯವಾಗಿ ಅವಮಾನಿಸಿತ್ತು. ಹೀಗಾಗಿ ಮಾರಾಟ ಮಾಡದೇ ಹಾಗೇ ಮರಳಿದ್ದ ರತನ್ ಟಾಟಾಗೆ ಈ ಅವಮಾನವು ಕಾರುಗಳ ಬಿಸಿನೆಸ್‌ನಲ್ಲಿ ಮತ್ತಷ್ಟು ಉತ್ತಮಗೊಳಿಸಿಕೊಳ್ಳುವಲ್ಲಿ ಪ್ರೇರೇಪಿಸಿತ್ತು.
ಇದನ್ನೂ ಓದಿ: Ratan Tata: ದೇಶದ ಪ್ರಖ್ಯಾತ ಉದ್ಯಮಿ ರತನ್ ಟಾಟಾ ನಿಧನ ಪ್ರಧಾನಿ ಮೋದಿ ಸೇರಿ ಹಲವರ ಕಂಬನಿ
ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿದ್ದ ಟಾಟಾ!
2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಇದರಲ್ಲಿ ಫೋರ್ಡ್ ಕಂಪನಿಯ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಪೂರ್ಣ ನಷ್ಟದಲ್ಲಿತ್ತು. ಹೀಗಾಗಿ ಎರಡೂ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಲ್ ಫೋರ್ಡ್, ಜಗತ್ತನ್ನು ಅಂಗಲಾಚುತ್ತಿದ್ದರು.
ಇದೇ ಅವಕಾಶವನ್ನು ಬಳಸಿಕೊಂಡ ಟಾಟಾ, ಎರಡೂ ಕಂಪನಿಗಳನ್ನು ಕೇವಲ 2.3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿ ಭಾರಿ ಲಾಭ ಪಡೆದರು. ಟಾಟಾ ಅವರಿಗೆ ಬಿಲ್ ಫೋರ್ಡ್ ಧನ್ಯವಾದ ಸಲ್ಲಿಸಿದ್ದರು.