Ratan Tata No more: ಖ್ಯಾತ ಉದ್ಯಮಿ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ (86) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಮುಂಬೈನ ಬ್ರೀಚ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೆಲ ಸಮಯದ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಟಾಟಾ ಅವರು 28 ಡಿಸೆಂಬರ್ 1937 ರಂದು ಮುಂಬೈನಲ್ಲಿ ಜನಿಸಿದ್ದರು. ಅವರ ಸಾವನ್ನು ಟಾಟಾ ಗ್ರೂಪ್ ಅಧಿಕೃತವಾಗಿ ದೃಢಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ (Ratan Tata No more)
ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಎಕ್ಸ್.ಕಾಂ ಖಾತೆಯಲ್ಲಿ ಸಂತಾಪ ಹಂಚಿಕೊಂಡಿದ್ದಾರೆ. ಮೋದಿ ಅವರ ಟ್ವೀಟ್ ಈ ಕೆಳಗಿನಂತೆ ಇದೆ.
[su_quote cite=”ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ”]ಶ್ರೀ ರತನ್ ಟಾಟಾ ಜಿ ಅವರು ದಾರ್ಶನಿಕ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅದೇ ಸಮಯದಲ್ಲಿ, ಅವರ ಕೊಡುಗೆಯು ಬೋರ್ಡ್ ರೂಮ್ ಅನ್ನು ಮೀರಿದೆ. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು ಅವರು ಹಲವಾರು ಜನರನ್ನು ಪ್ರೀತಿಸುತ್ತಿದ್ದರು. [/su_quote]