ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 224 ಬೃಹತ್ ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ತಂಡ, ನಾಯಕ ಸ್ಟಿವನ್ ಸ್ಮಿತ್ (50 ರನ್, 27 ಎಸೆತ), ಸಂಜು ಸ್ಯಾಮ್ಸನ್ (85 ರನ್, 42 ಎಸೆತ), ರಾಹುಲ್ ತೇವಟಿಯ (53 ರನ್, 31 ಎಸೆತ ) ಅವರ ಭರ್ಜರಿ ಆಟದಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿ 4 ವಿಕೆಟ್ ಗಳ ದಾಖಲೆಯ ಜಯ ದಾಖಲಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ರಾಜಸ್ಥಾನ್ ರಾಯಲ್ಸ್ ತಂಡ ಪಾತ್ರವಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಮಹಮದ್ ಶಮಿ 3 ವಿಕೆಟ್, ಕಾಟ್ರೆಲ್, ನೀಶಮ್, ಮುರುಗನ್ ಅಶ್ವಿನ್ ತಲಾ ವಿಕೆಟ್ ಪಡೆದು ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲವೆನ್ ತಂಡ ಆರಂಭಿಕ ಆಟಗಾರ ನಾಯಕ ಕೆ ಎಲ್ ರಾಹುಲ್ (68 ರನ್, 54 ಎಸೆತ), ಮತ್ತು ಮಾಯಾಂಕ್ ಅಗರ್ವಾಲ್ (106 ರನ್, 50 ಎಸೆತ), ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 223 ಬೃಹತ್ ರನ್ ಗಳಿಸಿತು. ರಾಜಸ್ತಾನ್ ರಾಯಲ್ಸ್ ಪರ ಅಂಕಿತ್ ರಜಪೂತ್, ಟಾಮ್ ಕರಣ್ ತಲಾ ಒಂದು ವಿಕೆಟ್ ಪಡೆದರು.
ರಾಜಸ್ತಾನ್ ರಾಯಲ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಸಂಜು ಸ್ಯಾಮ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಅನುಗೆ ಬಂಪರ್ ಆಫರ್…!