ಹರಳೆಣ್ಣೆಯ ಔಷಧೀಯ ಗುಣಗಳು:-
1) ಶುದ್ಧವಾದ ಹರಳೆಣ್ಣೆಯನ್ನು ಸೇವಿಸುವುದರಿಂದ ಸುಗಮವಾಗಿ ಮಲವಿಸರ್ಜನೆಗಯಾಗಿ ದೇಹ ಹಗುರವಾಗುತ್ತದೆ.
2) ಎದೆ ಹಾಲಿನೊಂದಿಗೆ ಅಪ್ಪಟ ಹರಳೆಣ್ಣೆಯನ್ನು ಮಿಶ್ರಮಾಡಿ ಕಣ್ಣಿಗೆ ಒಂದೆರಡು ಹನಿ ಬಿಡುವುದರಿಂದ ಕಣ್ಣುರಿ, ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪು ಗುಣವಾಗುವುದು.
3) ಹರಳೆಣ್ಣೆಯನ್ನು ಶರೀರಕ್ಕೆ, ತಲೆಗೆ ಚೆನ್ನಾಗಿ ತಿಕ್ಕಿಕೊಂಡು ಸ್ವಲ್ಪಕಾಲ ಬಿಸಿಲಿನ ಸ್ನಾನ ಮಾಡಿ ನಂತರ ಬಿಸಿನೀರಿನ ಅಭ್ಯಂಜನ ಮಾಡುವುದರಿಂದ ಮೈಕೈ ನೋವು, ಕೀಲು ನೋವು ದೂರವಾಗಿ ಚೆನ್ನಾಗಿ ನಿದ್ರೆ ಬರುವುದು.
4) ನಿಂಬೆರಸದೊಂದಿಗೆ ಹರಳೆಣ್ಣೆಯನ್ನು ಕುಡಿಯುವುದರಿಂದ ಹೊಟ್ಟೆ ತೊಳೆಸುವುದು ಮತ್ತು ಇತರ ಉದರ ಬೇನೆ ಗಳು ನಿವಾರಣೆಯಾಗುವುದು.
5) ಬಾಣಂತಿಯರು ಸ್ತನಗಳಿಗೆ ಹರಳೆಣ್ಣೆ ಹಚ್ಚಿ ತೊಟ್ಟನ್ನು ಎಳೆಯುತ್ತಿದ್ದರೆ ಹೆಚ್ಚು ಹಾಲು ಸ್ರವಿಸುವುದು.
6) ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ದೇಹಕ್ಕೆ ತಂಪಾಗುವುದು. ತಲೆಯಲ್ಲಿ ಹೊಟ್ಟು ಏಳುವುದಿಲ್ಲ ಮತ್ತು ಕೂದಲು ಹುಲುಸಾಗಿ ಬೆಳೆಯುವುದು.
ಇದನ್ನು ಓದಿ: ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಅನುಗೆ ಬಂಪರ್ ಆಫರ್…!