ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಮೂಲಕ ಹೆಸರುವಾಸಿಯಾದ “ಅನು” ಪಾತ್ರದಾರಿ ಖ್ಯಾತಿಯ ಮೆಗಾ ಶೆಟ್ಟಿ ಅವರು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದು ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅವಕಾಶ ಪಡೆಯುವ ಮೂಲಕ ನಟಿ ಮೇಘ ಶೆಟ್ಟಿ ಅವ್ರು ಮೊದಲ ಬಾರಿಗೆ ಕ್ಯಾಮರಾ ಮುಂದೆ ನಟಿಸಿದ್ದರು. ನಟಿ ಮೇಘ ಶೆಟ್ಟಿ ಅವರು ತಾವು ಐ ಎ ಎಸ್ ಆಗುವ ಕನಸನ್ನು ಕಂಡಿದ್ದರು, ಇದನ್ನು ಸ್ವತಃ ಮೇಘ ಶೆಟ್ಟಿ ಅವರೇ ಅನೇಕ ಬಾರಿ ಹೇಳಿಕೊಂಡಿದ್ದರು.ಆದರೆ ನಟಿ ಮೇಘ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅವಕಾಶ ಪಡೆಯುವ ಮೂಲಕ ಕಿರುತೆರೆಗೆ ಪರಿಚಯವಾದರು.
ನಟಿ ಮೇಘ ಶೆಟ್ಟಿ ಮತ್ತು ನಟ ಅನಿರುದ್ ನಟನೆಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸದ್ಯ ಯಶಸ್ವಿಯಾಗಿ ಪ್ರದರ್ಶವಾಗುತ್ತಿದ್ದು, ನಟಿ ಮೇಘ ಶೆಟ್ಟಿ ಅವರ ಅನು ಪಾತ್ರವನ್ನು ಸಹ ಕನ್ನಡ ಜನರು ಒಪ್ಪಿಕೊಂಡಿದ್ದಾರೆ.
ಈಗ ಕನ್ನಡದ ಸ್ಟಾರ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟನೆಯ ಹೊಸ ಸಿನಿಮಾ “ತ್ರಿಬಲ್ ರೈಡಿಂಗ್” ನಲ್ಲಿ ಅಭಿನಯಿಸುವ ಅವಕಾಶವನ್ನು ನಟಿ ಮೇಘ ಶೆಟ್ಟಿ ಅವರು ಪಡೆದುಕೊಂಡಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾವನ್ನು ಮಹೇಶ್ ಗೌಡ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಮೇಘ ಶೆಟ್ಟಿ ಸೇರಿದಂತೆ, ಹಾಸ್ಯನಟರಾದ ರಂಗಾಯಣ ರಘು, ಸಾದು ಕೋಕಿಲ, ಕುರಿ ಪ್ರತಾಪ್ ಅವರು ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.