ನವದೆಹಲಿ: ಸತತ 12 ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ನಿನ್ನೆ ಸ್ವಲ್ಪ ಸ್ಥಿರವಾಗಿದ್ದು, ಇಂದು ಮತ್ತೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಪ್ರತಿ ಲೀ. ಪೆಟ್ರೋಲ್ ದರ ₹93.61 ಆಗಿದೆ. 1 ಲೀ. ಡೀಸೆಲ್ ದರ ₹85.84 ದಾಖಲಾಗಿದೆ.
ಇನ್ನು ರಾಜಸ್ಥಾನ ಪ್ರತಿ ಲೀ. ಪೆಟ್ರೋಲ್ ದರ ₹97.31 ಆಗಿದೆ. 1 ಲೀ. ಡೀಸೆಲ್ ದರ ₹89.63 ಆಗಿದೆ. ಉತ್ತರ ಪ್ರದೇಶ 1 ಲೀ. ಪೆಟ್ರೋಲ್ ದರ ₹88.92 ಆಗಿದೆ. 1 ಲೀ. ಡೀಸೆಲ್ ದರ ₹81.41 ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ 1 ಲೀ. ಪೆಟ್ರೋಲ್ ದರ ₹91.78 ಆಗಿದೆ.
ತೈಲ ಬೆಲೆ ಏರಿಕೆಗೆ ಕಾರಣ ತಿಳಿಸಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್:
ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಒಪೆಕ್ (ಪೆಟ್ರೋಲಿಯಂ ಉತ್ಪನ್ನಗಳ ರಫ್ತು ರಾಷ್ಟ್ರಗಳ ಒಕ್ಕೂಟ) ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಆರೋಪಿಸಿದ್ದಾರೆ.
ಅತಿಯಾದ ಲಾಭದ ಆಸೆಯಿಂದ ಪೆಟ್ರೋಲ್, ಡೀಸೆಲ್ ಉತ್ಪಾದನೆಯನ್ನು ತಗ್ಗಿಸಿ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಇಂಧನ ಪೂರೈಕೆಯಾಗದ ಕಾರಣ ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ ಎಂದು ಸಚಿವರು ಹೇಳಿದ್ದಾರೆ. ದೇಶದ ಹಲವೆಡೆ ಈಗಾಗಲೇ ಪೆಟ್ರೋಲ್ ಶತಕ ಬಾರಿಸಿದ್ದು, ಸದ್ಯಕ್ಕೆ ದರ ಇಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.