ಜೈಪುರ್: ರಾಜ್ಯಸಭಾ ಮಾಜಿ ಸದಸ್ಯ ಹಾಗೂ ರಾಜಸ್ಥಾನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮದನಲಾಲ್ ಸೈನಿ ಅವರ ಕುಟುಂಬದ ನಾಲ್ವರು ಸದಸ್ಯರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಹನುಮಾನ್ ಪ್ರಸಾದ್ ಸೈನಿ, ಅವರ ಪತ್ನಿ ತಾರಾ ಹಾಗೂ ಇಬ್ಬರು ಮಕ್ಕಳಾದ ಅಂಜು ಮತ್ತು ಪೂಜಾ ಎಂದು ಗುರುತಿಸಲಾಗಿದೆ. ಕೆಲವು ತಿಂಗಳ ಹಿಂದೆ ಹದಿಹರೆಯದ ಮಗನ ಸಾವಿನಿಂದ ದಂಪತಿಗಳು ಮಾನಸಿಕ ಒತ್ತಡಕ್ಕೊಳಗಾಗಿದ್ದರು ಎಂದು ತಿಳಿದುಬಂದಿದ್ದು, ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮದನಲಾಲ್ ಸೈನಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಸಿಟಿ ಸಿಒ ವೀರೇಂದ್ರ ಶರ್ಮ ತಿಳಿಸಿದ್ದಾರೆ.
Rajasthan: Four members of a family died allegedly by suicide in Sikar.
“We found the bodies of a man, his wife and two daughters hanging. We were informed that a family member died a few months ago. We are investigating the matter,” says Virendra Sharma, CO city. pic.twitter.com/GyunDjARTp
— ANI (@ANI) February 21, 2021