ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳು; ಇಲ್ಲದೆ ಪಟಾಫಟ್ ನ್ಯೂಸ್

News of the week : ಮುಡಾ ಕೇಸ್, ಮೈಸೂರಿನಲ್ಲಿ ಧರ್ಮ ದಂಗಲ್, ಮೈಸೂರು ದಸರಾ ಚಾಲನೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲದೆ ಮುಡಾ ಕೇಸ್: 14…

News of the week : ಮುಡಾ ಕೇಸ್, ಮೈಸೂರಿನಲ್ಲಿ ಧರ್ಮ ದಂಗಲ್, ಮೈಸೂರು ದಸರಾ ಚಾಲನೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲದೆ

ಮುಡಾ ಕೇಸ್: 14 ಸೈಟ್ ಗಳ ಖಾತೆ ರದ್ದು

CM Siddaramaiah and Governor Thawar Chand Gehlot

ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಿದ್ದ 14 ಸೈಟ್‌ಗಳ ಖಾತೆಯನ್ನು ಮುಡಾ ರದ್ದು ಮಾಡಿದೆ. ಇನ್ನು, ಸೋಮವಾರ ತಡರಾತ್ರಿಯಷ್ಟೇ ಸಿಎಂ ಪತ್ನಿ ಸೈಟ್‌ಗಳನ್ನು ಹಿಂದಿರುಗಿಸಿ ಪತ್ರ ಬರೆದಿದ್ದು, ಒಂದೇ ದಿನದಲ್ಲಿ ಸೈಟ್ ಹಿಂದಕ್ಕೆ ಸ್ವೀಕಾರ ಮಾಡಲಾಗಿದೆ.

Vijayaprabha Mobile App free

ಮೈಸೂರಿನಲ್ಲಿ ಧರ್ಮ ದಂಗಲ್- Dharma Dangal in Mysore

ವಿಶ್ವವಿಖ್ಯಾತ ಮೈಸೂರು ದಸರಾ ಮುನ್ನವೇ ಧರ್ಮ ದಂಗಲ್ ಶುರುವಾಗಿದ್ದು, ಸಯ್ಯಾಜಿರಾವ್‌ ರಸ್ತೆಯಲ್ಲಿ ಅಳವಡಿಸಿರುವ ಗು೦ಬಜ್ ಮಾದರಿ ಹಸಿರು ಚಪ್ಪರದ ದೀಪಾಲಂಕಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿವಾದದ ಹೇಳಿಕೆ ನೀಡಿದ ಸಚಿವ

dinesh gundu rao vijayaprabha

ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಸಾವರ್ಕ‌ರ್ ಮಾಂಸಾಹಾರ ಸೇವನೆ ಮಾಡುತ್ತಿದ್ದರು ಮತ್ತು ಗೋಹತ್ಯೆಗೆ ವಿರುದ್ಧವಾಗಿರಲಿಲ್ಲ ಎ೦ದು ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.

ಮೈಸೂರು ದಸರಾಗೆ ಚಾಲನೆ

Mysore Dussehra 2024 vijayaprabha

ವಿಶ್ವ ವಿಖ್ಯಾತ ಮೈಸೂರು ದಸರಾ ಸಲುವಾಗಿ ತಾಯಿ ಚಾಮು೦ಡೇಶ್ವರಿ ಸನ್ನಿಧಾನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಡಾ. ಹಂಪ ನಾಗರಾಜಯ್ಯ ಪುಷ್ಪಾರ್ಚನೆ ಸಲ್ಲಿಸುವ ಮೂಲಕ 10 ದಿನಗಳ ದಸರಾ ಉತ್ಸವ 2024ಕ್ಕೆ ಅವರು ವಿಧ್ಯುಕ್ತ ಚಾಲನೆ ಕೊಟ್ಟಿದ್ದಾರೆ.

ಬಿಗ್ ಬಾಸ್ ಆರಂಭ

kiccha sudeep bigboss

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರಾಂಡ್ ಓಪನಿಂಗ್‌ ಆಗಿದ್ದು, ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್‌’ಗೆ ಎಂಟ್ರಿ ಕೊಟ್ಟಿದ್ದಾರೆ. ಸೋಮವಾರದಿ೦ದ ದೊಡ್ಡನೆಯಲ್ಲಿ ಸ್ಪರ್ಧಿಗಳ ಆಟ ಶುರುವಾಗಿದ್ದು, ಹಲವರ ನಡೆ ಕುತೂಹಲ ಮೂಡಿಸಿದೆ.

ರೇಣುಕಾಸ್ವಾಮಿ ಕೊಲೆ: ಆರೋಪಿಗಳಿಗೆ ಜಾಮೀನು

Renukaswamy murder case
Renukaswamy murder case

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆ ಆಗಿದ್ದು, ಹತ್ತು ದಿನಗಳ ಹಿಂದೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದ್ದು, ಕಾನೂನು ಪ್ರಕ್ರಿಯೆ ಜೊತೆಗೆ ಬಾಂಡ್ ಶೂರಿಟಿ ಸಿಕ್ಕ ಹಿನ್ನೆಲೆ ಬಿಡುಗಡೆಯಾಗಿದ್ದಾರೆ.

ದಸರಾಗೆ 3 ವಿಶೇಷ ಆನೆಗಳು

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುವ ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ನಡೆಯಲಿದೆ. ಇಲ್ಲಿನ ದಸರಾಗೆ ಈ ಬಾರಿ ಸಕ್ರೆಬೈಲಿನ ಸಾಗರ್, ಬಾಲಣ್ಣ ಹಾಗೂ ಬಹದ್ದೂ‌ರ್ ವಿಶೇಷ ಆನೆಗಳು ಎಂಟ್ರಿಕೊಡುತ್ತಿವೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ನಟಿ ಹರ್ಷಿಕಾ ಪೂಣಚ್ಚ & ನಟ ಭುವನ್ ಪೊನ್ನಣ್ಣ ಪೋಷಕರಾಗಿ ಬಡ್ತಿ ಪಡೆದಿದ್ದು, ನವರಾತ್ರಿ ಮೊದಲನೇ ದಿನ ಮಗಳನ್ನು ಬರ ಮಾಡಿಕೊ೦ಡಿದ್ದಾರೆ. ಕಂದಮ್ಮನ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.