News of the week : ರಾಜ್ಯದಲ್ಲಿ ಈ ವಾರ ನಡೆದ ಟಾಪ್ ಸುದ್ದಿಗಳು

News of the week : ವಿಶ್ವ ವಿಖ್ಯಾತ ಜಂಬೂಸವಾರಿ, ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಸ್ವೀಕಾರ, ಅನ್ನಭಾಗ್ಯ ಯೋಜನೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲದೆ..  News of…

news of the week

News of the week : ವಿಶ್ವ ವಿಖ್ಯಾತ ಜಂಬೂಸವಾರಿ, ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಸ್ವೀಕಾರ, ಅನ್ನಭಾಗ್ಯ ಯೋಜನೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲದೆ.. 

News of the week – ಈ ವಾರ ನಡೆದ ಟಾಪ್ ಸುದ್ದಿಗಳು 

  1. ವಿಶ್ವ ವಿಖ್ಯಾತ ಜಂಬೂಸವಾರಿ
  2. ದಸರಾ ವೈಭವ
  3. ರೈಲು ಅಪಘಾತ
  4. ಅನ್ನಭಾಗ್ಯ ಯೋಜನೆ
  5. ಹೈಕೋರ್ಟ್‌ ಆದೇಶ
  6. ದರ್ಶನ್‌ ಜಾಮೀನು
  7. ಮತ್ತೋರ್ವ ಶಾಸಕರ ವಿರುದ್ಧ ಆರೋಪ
  8. ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಸ್ವೀಕಾರ
  9. ಶಿಕ್ಷಕರ ನೇಮಕಾತಿ

1. ವಿಶ್ವ ವಿಖ್ಯಾತ ಜಂಬೂಸವಾರಿ – World Famous Jambusawari

ಸಿಎಂ ಸಿದ್ದರಾಮಯ್ಯ ಅವರು ಜಂಬೂಸವಾರಿಗೆ ಚಾಲನೆ ನೀಡದ ಬಳಿಕ ಅಭಿಮನ್ಯು ಜಂಬೂಸವಾರಿ ಹೊತ್ತು ಸಾಗಿದನು. ಮೈಸೂರು ಅರಮನೆಯಲ್ಲಿ ನವರಾತ್ರಿಯ ಎಲ್ಲಾ ದಿನಗಳು ರಾಜ ಯದುವೀರ ದತ್ತ ಒಡೆಯ‌ರ್ ಅವರಿಂದ ವಿಶೇಷ ಪೂಜೆಗಳು ನೆರವೇರಿದವು.

Vijayaprabha Mobile App free

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ; ಇಂದು ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಚಾಲನೆ

2. News of the week – ದಸರಾ ವೈಭವ

ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆಮಾಡಿತ್ತು. ಎಲ್ಲರೂ ಶ್ರೀ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಿ ಕೃತಾರ್ಥರಾದರು. ಕೆಲವರು ತಮ್ಮ ಮನೆಗಳಲ್ಲಿ ಸಂಪ್ರದಾಯಿಕವಾಗಿ ಗೊಂಬೆ ಕೂರಿಸಿ ಆನ೦ದಿಸಿದರು. ಹಾಗೂ ದಾಂಡಿಯಾ ನೈಟ್ ಗಳು ಈ ಬಾರಿ ಹೆಚ್ಚು ಗಮನ ಸೆಳೆದವು.

3. ರೈಲು ಅಪಘಾತ : Mysore-Darbanga train

ಚೆನ್ನೈ ಸಮೀಪದಲ್ಲಿರುವ ಕವರೈಪೆಟ್ಟಿ ಬಳಿ ಮೈಸೂರು-ದರ್ಬಂಗಾ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲಿನ ನಡುವೆ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ 19 ಪ್ರಯಾಣಿಕರಿಗೆ ಗ೦ಭೀರ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಮೈಸೂರಿನಿಂದ ಹೊರಟಿದ್ದ ರೈಲು, ತಮಿಳುನಾಡಿನಲ್ಲಿ ಭೀಕರ ಅಪಘಾತ!

4. ಅನ್ನಭಾಗ್ಯ ಯೋಜನೆ – Annabhagya Yojana

Anna bhagya yojana
Anna bhagya yojana

ಅನ್ನ ಭಾಗ್ಯ ಯೋಜನೆಯ ಡಿಬಿಟಿ ಹಣವನ್ನು ಸರ್ಕಾರ ಎರಡು ತಿಂಗಳಿನಿಂದ ಕೊಟ್ಟಿರಲಿಲ್ಲ. ಹೀಗಾಗಿ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ಹಣ ಬಿಡುಗಡೆ ಕುರಿತು ಸಚಿವ ಕೆ ಎಚ್‌ ಮುನಿಯಪ್ಪ ಅವರು ಶೀಘ್ರವೇ ಹಣ ಸಿಗಲಿದೆ ಎ೦ದಿದ್ದಾರೆ.

ಇದನ್ನೂ ಓದಿ: Anna bhagya yojana : 3 ತಿಂಗಳಿನಿಂದ ಬಾರದ ಅನ್ನಭಾಗ್ಯ ಯೋಜನೆ ಹಣ; ಸರ್ಕಾರದಿಂದ ಮಾಹಿತಿ

5. ಹೈಕೋರ್ಟ್‌ ಆದೇಶ – High Court order

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸಿದ್ದ ನರ್ಸ್‌ಗಳ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್, ಗುತ್ತಿಗೆ ಆಧಾರದಲ್ಲಿ ಸೇವೆ ಕಾಯಂಗೊಳಿಸುವಂತೆ ಆದೇಶಿಸಿದೆ. ಅಲ್ಲದೆ ಈವರೆಗೆನ ಸಂಸ್ಥೆಯ ನಡೆಯನ್ನು ಟೀಕಿಸಿದೆ.

6. ದರ್ಶನ್‌ ಜಾಮೀನು – Darshan bail

Actor Darshan Pavitra Gowda relationship

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅ. 10 ರಂದು ಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ವಿಚಾರಣೆ ನಡೆದಿದೆ. ಇನ್ನು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿ ಜಡ್ಜ್‌ ಜೈಶಂಕರ್ ಆದೇಶ ಹೊರಡಿಸಿದ್ದಾರೆ. ಈ ನಡುವೆ ದರ್ಶನ್ ಅವರ ನವಗ್ರಹ ರೀ ರಿಲೀಸ್ ಆಗುತ್ತದೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.

7.News of the week – ಮತ್ತೋರ್ವ ಶಾಸಕರ ವಿರುದ್ಧ ಆರೋಪ

Vinay Kulkarni

ಧಾರವಾಡ ಶಾಸಕ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಎಸಗಿರುವ ಆರೋಪವನ್ನು ಮಾಡಿದ್ದು, ಇದಕ್ಕೆ ಸ೦ಬ೦ಧಿಸಿದ೦ತೆ ಸಂಜಯ್ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಇನ್ನು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದೆ.

8. ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಸ್ವೀಕಾರ – Rishabh Shetty receiving the National Award

RISHAB SHETTY

ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ಹೀಗೆ ಎರಡು ಪ್ರಶಸ್ತಿಗಳು ಕಾಂತಾರ ಚಿತ್ರಕ್ಕೆ ಬ೦ದಿವೆ. ಒ೦ದೇ ಚಿತ್ರಕ್ಕೆ ಎರಡು ಪ್ರಶಸ್ತಿಯ ಖುಷಿಯನ್ನು ರಿಷಬ್ ಶೆಟ್ಟಿ ಅವಾರ್ಡ್ ಸ್ವೀಕರಿಸುವ ಸಮಯದಲ್ಲಿ ಹಂಚಿಕೊಂಡಿದ್ದಾರೆ.

9. ಶಿಕ್ಷಕರ ನೇಮಕಾತಿ – Recruitment of teachers

ಕರ್ನಾಟಕ ಸರ್ಕಾರವು 2024-25ನೇ ಸಾಲಿನ ಆಯವ್ಯಯ ಭಾಷಣದ ಘೋಷಣೆಯ೦ತೆ, ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದ್ದು, ಬರೋಬ್ಬರಿ 5267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಆದೇಶಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.