Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಚಿಗುರುವುದು ಹೊಸದೇನೂ ಅಲ್ಲ. ಪ್ರತಿ ಸೀಸನ್ನಲ್ಲೂ ಆ ರೀತಿಯ ಘಟನೆಗಳು ನಡೆಯಲಿದ್ದು, ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಕೂಡ ಐಶ್ವರ್ಯಾ ಸಿಂಧೋಗಿ, ಧರ್ಮ ಕೀರ್ತಿರಾಜ್ ಹಾಗೂ ಅನುಷಾ ರೈ ನಡುವೆ ತ್ರಿಕೋನ ಪ್ರೇಮಕಥೆ ಶುರುವಾದಂತಿದೆ.
ಈ ಬಗ್ಗೆ ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯಲ್ಲಿ ಚರ್ಚೆ ಆಗಲಿದೆ.ತಮಗೆ ಧರ್ಮ ಕೀರ್ತಿರಾಜ್ ಇಷ್ಟ ಆಗಿದ್ದಾರೆ ಎಂದು ಐಶ್ವರ್ಯಾ ಸಿಂಧೋಗಿ ಈಗಾಗಲೇ ಹೇಳಿದ್ದಾರೆ. ಧರ್ಮ ಮತ್ತು ಅನುಷಾ ರೈ ಜೊತೆಯಲ್ಲಿ ಇದ್ದಾಗ ಐಶ್ವರ್ಯಾ ಬೇಸರ ಮಾಡಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಹಲವರಿಗೆ ಇದ್ದು, ಈ ವಿಷಯವನ್ನು ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡಲಿದ್ದಾರೆ.
ಇದನ್ನೂ ಓದಿ: ಜಗದೀಶ್ ವಕೀಲರೇ ಅಲ್ಲ: ವಕೀಲರ ಸಂಘದಿಂದ ಬಹಿರಂಗ ಪತ್ರ
ಈ ನಡುವೆ ಗೋಲ್ಡ್ ಸುರೇಶ್ ಅವರು ಒಂದು ಹಳೇ ಲವ್ ಸ್ಟೋರಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತ್ರಿಕೋನ ಪ್ರೇಮಕಥೆಯ ಬಗ್ಗೆ ಐಶ್ವರ್ಯಾ, ಧರ್ಮ, ಅನುಷಾ ಅವರು ಸುದೀಪ್ ಜೊತೆ ಮಾತನಾಡಿದ್ದಾರೆ.
ಈ ವಾರ ಮನೆಯಿಂದ ಯಾರು ಹೋಗ್ತಾರೆ?
ಇನ್ನು, ಈ ವಾರ ಯಾರು ಬಿಗ್‌ಬಾಸ್ ಮನೆಯಿಂದ ಹೊರಹೋಗುತ್ತಾರೆ ಎನ್ನುವ ಪ್ರಶ್ನೆ ಕಾಡಿದೆ. ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಂ, ಭವ್ಯಾ ಗೌಡ, ಧನರಾಜ್, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಇರಲ್ಲ ಎನ್ನಲಾಗಿದ್ದು, ಕೆಲವೊಮ್ಮೆ ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್ ನಲ್ಲಿ ಕೂರಿಸಿ ಆ ಬಳಿಕ ಎಲಿಮಿನೇಷನ್ ಇಲ್ಲವೆಂದು ಹೇಳಲಾಗುತ್ತದೆ.