Aadhaar authentication: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

Aadhaar Card Aadhaar Card

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆಧಾರ್ ಕಾರ್ಡ್ (Aadhaar card) ಕುರಿತು ಮಹತ್ವದ ಘೋಷಣೆ ಮಾಡಿದೆ. ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವವರು ಇದನ್ನು ಗಮನಿಸಬೇಕು.

Aadhaar authentication: ಆಧಾರ್ ಕಾರ್ಡ್ (Aadhaar card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ತೆರಿಗೆ, ಸಾಲ, ಕ್ರೆಡಿಟ್ ಕಾರ್ಡ್, ಐಟಿಆರ್ ಮುಂತಾದ ಹಲವು ವಿಷಯಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ.

ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!

Advertisement

Unique Identification Authority of India (UIDAI) ಈ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. 30 ನವೆಂಬರ್ 2022 ರಂತೆ, UIDAI ಇಲ್ಲಿಯವರೆಗೆ ಸುಮಾರು 135.1 ಕೋಟಿ ಆಧಾರ್ ಕಾರ್ಡ್‌ಗಳನ್ನು ನೀಡಿದ್ದು, ಇದೀಗ ಭಾರತ ಸರ್ಕಾರ ಇತ್ತೀಚೆಗೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಖಾಸಗಿ ಕಂಪನಿಗಳಿಂದಲೂ ಆಧಾರ್ ದೃಢೀಕರಣ:

Aadhaar
Aadhaar Authentication

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಧಾರ್ ದೃಢೀಕರಣ (Aadhaar Authentication) ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು, ಪ್ರಸ್ತುತ ಆಧಾರ್ ದೃಢೀಕರಣವನ್ನು (Aadhaar Authentication) ಸಾರ್ವಜನಿಕ ವಲಯದ ಸಂಸ್ಥೆಗಳು ಅಥವಾ ಸಚಿವಾಲಯಗಳು ಮಾತ್ರ ಮಾಡುತ್ತವೆ. ಆದರೆ ಆಧಾರ್ ದೃಢೀಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದ್ದು, ಆಧಾರ್ ದೃಢೀಕರಣವನ್ನು  ಖಾಸಗಿ ಕಂಪನಿಗಳಿಗೂ ಹಸ್ತಾಂತರಿಸುವ ನಿರೀಕ್ಷೆಯಿದೆ.

ಇದನ್ನು ಓದಿ: PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !

ಹೌದು, ಜನರಿಗೆ ಆಧಾರ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಮತ್ತು ಉತ್ತಮ ಸೇವೆಗಳನ್ನು ಒದಗಿಸಲು, ಮೋದಿ ಸರ್ಕಾರವು ಇತ್ತೀಚೆಗೆ ಸರ್ಕಾರಿ ಸಚಿವಾಲಯಗಳು, ಇತರ ಸರ್ಕಾರಿ ಇಲಾಖೆಗಳು ಮತ್ತು ಇತರ ಖಾಸಗಿ ಸಂಸ್ಥೆಗಳಿಂದ ಆಧಾರ್ ದೃಢೀಕರಣವನ್ನು ಸಕ್ರಿಯಗೊಳಿಸಲು ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಪ್ರಸ್ತಾಪಿಸಿದ್ದು, ಈ ನಿಬಂಧನೆಗಳು ಸರ್ಕಾರಿ ಇಲಾಖೆಗಳು ಒದಗಿಸುವ ಪ್ರಯೋಜನಗಳು, ಸೇವೆಗಳು ಮತ್ತು ರಿಯಾಯಿತಿಗಳಿಗಾಗಿ ಖಾಸಗಿ ಘಟಕಗಳಿಗೆ ಆಧಾರ್ ದೃಢೀಕರಣವನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲವೇ? ಆನ್‌ಲೈನ್‌ನಲ್ಲಿ ಸುಲಭವಾಗಿ ಮನೆಯಲ್ಲೇ ಅರ್ಜಿ ಸಲ್ಲಿಸಿ..!

ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಲು, ಸೇವೆಗಳನ್ನು ಅವರಿಗೆ ಸುಲಭವಾಗಿ ತಲುಪಿಸಲು, ಉತ್ತಮ ಆಡಳಿತಕ್ಕಾಗಿ ಡಿಜಿಟಲ್ ವೇದಿಕೆಗಳ (Digital Platform) ಬಳಕೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತಿಳಿಸಿದೆ.

ಆಧಾರ್ ದೃಢೀಕರಣಕ್ಕೆ ಸರ್ಕಾರದಿಂದ ಪೂರ್ವಾನುಮತಿ:

ಆಧಾರ್ ದೃಢೀಕರಣ (Aadhaar Update) ಸೇವೆಗಳನ್ನು ಪಡೆಯಲು ಉದ್ದೇಶಿಸಿರುವ ಖಾಸಗಿ ಸಂಸ್ಥೆಗಳು ಅದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ (Central Govt) ಪೂರ್ವಾನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಆ ನಂತರವೇ ಆಧಾರ್ ದೃಢೀಕರಣವನ್ನು (Aadhaar Update) ಮಾಡಬೇಕು. ಇಲ್ಲದಿದ್ದರೆ ಅದು ಸಾಧ್ಯವಿಲ್ಲ.

ಇನ್ನು, ಆಧಾರ್ ಕಾರ್ಡ್ ಹೊಂದಿರುವವರು ಈಗ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು. ಹೌದು, ಈ ಸೌಲಭ್ಯವು ಜೂನ್ 14 ರವರೆಗೆ ಲಭ್ಯವಿರುತ್ತದೆ. ಅದರ ನಂತರ ಶುಲ್ಕಗಳು ಎಂದಿನಂತೆ ಇರುತ್ತವೆ. ಆದ್ದರಿಂದ ಆಧಾರ್ ಕಾರ್ಡ್ ನವೀಕರಿಸಲು (Aadhaar Update) ಬಯಸುವವರು ಈಗಲೇ ಈ ಕೆಲಸ ಮಾಡಿ.

ಇದನ್ನು ಓದಿ: ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್;‌ ಇನ್ಮುಂದೆ ಆಧಾರ್ ಇದ್ದರೆ ಸಾಕು, ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ಅಕ್ಕಿ.!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!