ಕೇಂದ್ರ ಸರ್ಕಾರವು LPG ಗ್ಯಾಸ್ ಸಿಲಿಂಡರ್ ಬುಕಿಂಗ್, ಡೆಲಿವರಿ & ಸಬ್ಸಿಡಿಗೆ ಸ೦ಬ೦ಧಿಸಿದ೦ತೆ ಹೊಸ ನಿಯಮ ಜಾರಿಗೆ ತರಲಿದೆ. ಕೇಂದ್ರ ಸರ್ಕಾರದ ರೇಷನ್ ಕಾರ್ಡ್ & ಗ್ಯಾಸ್ ಸಿಲಿಂಡರ್ ಯೋಜನೆಯಡಿ ಹಲವಾರು ಬದಲಾವಣೆಗಳು ನಡೆಯಲಿವೆ. ಗ್ರಾಹಕರು ಕೆವೈಸಿ ಅಪ್‌ಡೇಟ್ ಮಾಡುವುದು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ & ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
2028 ರವರೆಗೆ ಜಾರಿ
2025ರ ಏಪ್ರಿಲ್ 21ರಿಂದಲೇ ನಿಯಮಗಳು ಜಾರಿಗೆ ಬ೦ದಿದ್ದು, 2028ರ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತವೆ. ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ವ೦ಚನೆಯನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಈ ಕ್ರಮವು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಮಾಡಿದೆ. ತಂತ್ರಜ್ಞಾನವನ್ನು ಬಳಸಿಕೊ೦ಡು ವ್ಯವಸ್ಥೆ ಸುಧಾರಿಸುವ ಪ್ರಯತ್ನ ಇದಾಗಿದೆ.
KYC ಅಷ್ಟೇಟ್ ಕಡ್ಡಾಯ
LPG ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮೊದಲು KYC ಅಪ್‌ಡೇಟ್ ಮಾಡುವುದು ಈಗ ಕಡ್ಡಾಯವಾಗಿದೆ. ಇದಕ್ಕಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಗ್ಯಾಸ್ ಏಜೆನ್ಸಿಗೆ ಲಿಂಕ್ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ಅನ್ನು ಕೂಡ ನೀಡಬೇಕು. ಆಧಾರ್ ಕಾರ್ಡ್ ಮೊಬೈಲ್ ನಂಬರ್ ಜೊತೆ ಲಿಂಕ್ ಆಗಿರಬೇಕು. ಒಂದು ವೇಳೆ ನೀವು KYC ಅಪ್‌ಡೇಟ್ ಮಾಡದಿದ್ದರೆ, ಗ್ಯಾಸ್ ಬುಕಿಂಗ್‌ನಲ್ಲಿ ತೊ೦ದರೆಯಾಗುತ್ತದೆ.
OTP ಇಲ್ಲ ಅಂದ್ರೆ ಸಿಲಿಂಡರ್ ಇಲ್ಲ
ವಿತರಣೆಯ ಸಮಯದಲ್ಲಿ OTP ಅಗತ್ಯ. ಸಿಲಿಂಡರ್ ಬುಕ್ ಮಾಡಿದಾಗ ಗ್ರಾಹಕರಿಗೆ OTP ಬರುತ್ತದೆ. ಸಿಲಿಂಡರ್ ಡೆಲಿವರಿ ಮಾಡುವ ವ್ಯಕ್ತಿಗೆ ಈ OTP ಯನ್ನು ನೀಡಬೇಕು. “OTP ಇಲ್ಲ ಅಂದ್ರೆ ಸಿಲಿಂಡರ್ ಇಲ್ಲ” ಎ೦ಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಸಬ್ಸಿಡಿ ಇಲ್ಲ
LPG ಮೇಲಿನ ಸಬ್ಸಿಡಿಯನ್ನು ಪಡೆಯಲು ಕೆಲವು ನಿಯಮಗಳನ್ನು ಬದಲಾಯಿಸಲಾಗಿದೆ. ಸಬ್ಸಿಡಿ ಪಡೆಯಲು ನಿಮ್ಮ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕನೆಕ್ಷನ್ ಅನ್ನು ಲಿಂಕ್ ಮಾಡಬೇಕು. ಸಬ್ಸಿಡಿ ಮೊತ್ತವು ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಒ೦ದು ವರ್ಷದಲ್ಲಿ 6-8 ಸಿಲಿಂಡರ್‌ಗಳಿಗಿಂತ ಹೆಚ್ಚು ಬಳಸಿದರೆ, ಸಬ್ಸಿಡಿ ಸಿಗುವುದಿಲ್ಲ.
KYC ಅಪಡೇಟ್ ಗೆ ಬೇಕಾದ ದಾಖಲೆಗಳು
- ನಿಮ್ಮ ಆಧಾರ್ ಕಾರ್ಡ್
- ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಅಕೌಂಟ್ ವಿವರ
- ಗ್ಯಾಸ್ ಕನೆಕ್ಷನ್ ಬುಕ್