ಡೆಂಗ್ಯೂ ಜ್ವರ (dengue fever) ಎಷ್ಟು ಅಪಾಯಕಾರಿ ಎನ್ನುವುದು ತಿಳಿದೇ ಇದೆ. ಸೋಂಕಿತ ಸೊಳ್ಳೆಯಿಂದ ಕಚ್ಚಿಸಿಕೊಳ್ಳುವುದರಿ೦ದ ಉಂಟಾಗುವ ಈ ಜ್ವರವು ದೇಹದಲ್ಲಿ ವಿಪರೀತ ನೋವನ್ನುಂಟು ಮಾಡುತ್ತದೆ. ಅದರಲ್ಲೂ ಡೆಂಗ್ಯೂ ತೀವ್ರ ರೂಪಕ್ಕೆ ಬದಲಾದರೆ ಅಪಾಯಕಾರಿ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ. ಹಾಗಾಗಿ ಡೆಂಗ್ಯೂವನ್ನು ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸುವ ತಪ್ಪು ಮಾಡದಿರಿ.
ರಾಷ್ಟ್ರೀಯ ಡೆಂಗ್ಯೂ ದಿನದ ಥೀಮ್
ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ. 2025 ರ ರಾಷ್ಟ್ರೀಯ ಡೆಂಗ್ಯೂ ದಿನದ ಥೀಮ್ ಅನ್ನು “ಬೇಗ ಕ್ರಮ ಕೈಗೊಳ್ಳಿ, ಡೆಂಗ್ಯೂ ತಡೆಯಿರಿ: ಸ್ವಚ್ಛ ಪರಿಸರ, ಆರೋಗ್ಯಕರ ಜೀವನ” ಎ೦ದು ಇರಿಸಲಾಗಿದೆ. ಈ ಧೈಯವಾಕ್ಯವು ಡೆಂಗ್ಯೂ ತಡೆಗಟ್ಟಲು, ನಾವು ತ್ವರಿತವಾಗಿ ಪ್ರತಿಕ್ರಿಯಿಸಬೇಕು ಮತ್ತು ಪರಿಸರವನ್ನು ಸ್ವಚ್ಛವಾಗಿ & ಆರೋಗ್ಯಕರವಾಗಿಡಬೇಕು ಎ೦ಬುದನ್ನು ಹೇಳುತ್ತದೆ.
ಸಂಪೂರ್ಣ ಸ್ವಚ್ಚತೆಯ ಬಗ್ಗೆ ಕಾಳಜಿ
ಮನೆಯ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅತ್ಯಂತ ಮುಖ್ಯವಾಗುತ್ತದೆ. ಅದಕ್ಕಾಗಿ ಹೊದ್ದುಕೊಳ್ಳುವ ಬೆಡ್ ಶೀಟ್ ಗಳು, ಶುದ್ಧವಾಗಿರಬೇಕು. & ಆಗಾಗ್ಗೆ ಇದನ್ನು ಒಗೆಯುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಇದನ್ನು ಆಗಾಗ ಬದಲಿಸುವುದನ್ನು ನೋಡಿಕೊಳ್ಳಿ.
ಪೌಷ್ಟಿಕ ಆಹಾರ
ಡೆಂಗ್ಯೂ ಜ್ವರ ಬರದಂತೆ ಜಾಗ್ರತೆವಹಿಸುವುದು ಮುಖ್ಯ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪೌಷ್ಟಿಕ ಆಹಾರವನ್ನು ತಿನ್ನಬೇಕು. ಜೀವಸತ್ವಗಳು ಮತ್ತು ಖನಿಜಗಳು ಸಮೃದ್ದವಾಗಿರುವ ಆಹಾರದ ಸೇವನೆ. ಕಿವಿ ಹಣ್ಣು, ಎಲೆಕೋಸು, ಕಿತ್ತಳೆ, ಟೊಮೆಟೊದಂತಹ ವಿಟಮಿನ್ ಸಿ ಸಮೃದ್ದವಾಗಿರುವ ಆಹಾರ ಸೇವಿಸಿ.
ನಿಂತ ನೀರು ಇಲ್ಲದಂತೆ ನೋಡಿಕೊಳ್ಳಿ
ಡೆಂಗ್ಯೂವಿನಂತಹ ರೋಗವು ಹರಡದೇ ಇರಲು ನೀವು ಹೇಗೆ ಮನೆಯೊಳಗೆ ಸ್ವಚ್ಚತೆಯ ಬಗ್ಗೆ ಕಾಳಜಿವಹಿಸುವುದು ಮುಖ್ಯ. ನಿಂತ ನೀರಿನಲ್ಲಿ ಸೊಳ್ಳೆಗಳು ಬೇಗನೇ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಈ ಸೊಳ್ಳೆಗಳಿಂದ ಡೆಂಗ್ಯೂವಿನಂತಹ ರೋಗಗಳು ಹರಡುತ್ತವೆ. ನಿಯಮಿತವಾಗಿ ನೀರನ್ನು ನಿಲ್ಲುವ ಜಾಗಗಳು, ನೀರು ಹಿಡಿದಿಡುವ ಪಾತ್ರೆಗಳನ್ನು ಸ್ವಚ್ಚಗೊಳಿಸಿ.
ಸೊಳ್ಳೆ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಿರಿ
ಸಂಜೆಯಾಗುತ್ತಿದ್ದಂತೆ, ನಿಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಹಾಕಿ. ಹೀಗೆ ಮಾಡುವುದರಿಂದ ಸೊಳ್ಳೆಗಳು ಮನೆಗೆ ಪ್ರವೇಶಿಸುವುದನ್ನು ತಡೆಯಬಹುದು ಮತ್ತು ಅದರ ಮೂಲಕ ಡೆಂಗ್ಯೂ ಹರಡುವುದನ್ನು ತಪ್ಪಿಸಬಹುದು. ಅಲ್ಲದೆ ಸೊಳ್ಳೆಗಳನ್ನು ಓಡಿಸುವ ನೈಸರ್ಗಿಕ ಉಪಾಯಗಳು ಮತ್ತು ಅವುಗಳ ಪ್ರವೇಶವನ್ನು ತಡೆಯಲು ಸೊಳ್ಳೆ ಪರದೆಗಳು ಇತ್ಯಾದಿಗಳನ್ನು ಬಳಸಿ