ಎಚ್ಚರ: ಪುರುಷ ಸಲಿಂಗಿಗಳು, ದ್ವಿಲಿಂಗಿಗಳಲ್ಲೇ ಶೇ.98ರಷ್ಟು ಮಂಕಿಪಾಕ್ಸ್‌ ಪ್ರಕರಣ ಪತ್ತೆ; ಮಂಕಿಪಾಕ್ಸ್‌ನ ಲಕ್ಷಣಗಳು ಹೀಗಿವೆ

ಮಂಕಿಪಾಕ್ಸ್‌ ಭೀತಿ ಜಗತ್ತಿನಾದ್ಯಂತ ಆವರಿಸಿದ್ದು, ಸೋಂಕು ಕಾಣಿಸಿಕೊಂಡಿರುವವರಲ್ಲಿ ಪುರುಷ ಸಲಿಂಗಿಗಳು, ದ್ವಿಲಿಂಗಿಗಳೇ ಶೇ.98ರಷ್ಟಿರುವುದು ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪುರುಷರು ತಮ್ಮ ಲೈಂಗಿಕ ಸಂಗಾತಿಗಳಿಂದ ಆದಷ್ಟೂ ದೂರವಿರಬೇಕೆಂದು ಡಬ್ಲ್ಯೂಹೆಚ್‌ಒ ಹೇಳಿದೆ. ಈ ಮೂಲಕ ಪುರುಷರು…

monkeypox vijayaprabha news

ಮಂಕಿಪಾಕ್ಸ್‌ ಭೀತಿ ಜಗತ್ತಿನಾದ್ಯಂತ ಆವರಿಸಿದ್ದು, ಸೋಂಕು ಕಾಣಿಸಿಕೊಂಡಿರುವವರಲ್ಲಿ ಪುರುಷ ಸಲಿಂಗಿಗಳು, ದ್ವಿಲಿಂಗಿಗಳೇ ಶೇ.98ರಷ್ಟಿರುವುದು ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪುರುಷರು ತಮ್ಮ ಲೈಂಗಿಕ ಸಂಗಾತಿಗಳಿಂದ ಆದಷ್ಟೂ ದೂರವಿರಬೇಕೆಂದು ಡಬ್ಲ್ಯೂಹೆಚ್‌ಒ ಹೇಳಿದೆ.

ಈ ಮೂಲಕ ಪುರುಷರು ಮಂಕಿಪಾಕ್ಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥರು ಸಲಹೆ ನೀಡಿದ್ದು, ಈವರೆಗೆ ವಿಶ್ವದಲ್ಲಿ 18 ಸಾವಿರ ಮಂದಿಯಲ್ಲಿ ಮಂಕಿಪಾಕ್ಸ್‌ ಕಾಣಿಸಿಕೊಂಡಿದ್ದು, ದೇಶದಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

ಮಂಕಿಪಾಕ್ಸ್‌ನ ಲಕ್ಷಣಗಳು:

Vijayaprabha Mobile App free

ಜಗತ್ತಿಗೆ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಪ್ರಕರಣಗಳು ಭಾರತದಲ್ಲೂ ವರದಿ ಆಗಿದ್ದು, ಈ ರೋಗದ ಲಕ್ಷಣಗಳನ್ನು WHO ಪಟ್ಟಿ ಮಾಡಿದೆ.

* ಮುಖ, ಕೈ, ಪಾದ, ದೇಹ, ಕಣ್ಣು, ಬಾಯಿ ಅಥವಾ ಜನನಾಂಗಗಳ ಮೇಲೆ ಗುಳ್ಳೆಗಳ ರಾಶಸ್.

* ಜ್ವರ

* ತಲೆನೋವು

* ಊದಿಕೊಂಡ ದುಗ್ಧರಸ ಗ್ರಂಥಿಗಳು

* ಸ್ನಾಯು ಮತ್ತು ಬೆನ್ನು ನೋವು

* ನಿಶ್ಯಕ್ತಿಯಾಗುವುದು. ಮಂಕಿಪಾಕ್ಸ್‌ನ ರೋಗ ಲಕ್ಷಣಗಳು 2 ರಿಂದ 4 ವಾರಗಳವರೆಗೆ ಇರುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.