ವಿಕ್ರಾಂತ್ ರೋಣ REVIEW; ರಾ ರಾ ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್

ಬೆಂಗಳೂರು: ವಿಶ್ವದಾತ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಅವರ ‘ರಂಗಿತರಂಗ’ ಸಿನಿಮಾ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಮೂಡಿಬಂದಿದೆ. ಹೌದು, ‘ವಿಕ್ರಾಂತ್ ರೋಣ’…

Vikrant Rona vijayaprabha news

ಬೆಂಗಳೂರು: ವಿಶ್ವದಾತ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಅವರ ‘ರಂಗಿತರಂಗ’ ಸಿನಿಮಾ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಮೂಡಿಬಂದಿದೆ.

ಹೌದು, ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಪಾತ್ರ ಡಿಫರೆಂಟ್ ಆಗಿದ್ದು, ಮೊದಲಾರ್ಧ ಸಸ್ಪೆನ್ಸ್ ಮತ್ತು ಕಾಮಿಡಿ ಜೊತೆಯಲ್ಲಿ ಸಾಗುತ್ತದೆ. ಅಷ್ಟೇ ಅಲ್ಲ, ರಾ ರಾ ರಕ್ಕಮ್ಮ ಹಾಡಿಗೆ ಕಿಚ್ಚ ಸುದೀಪ್‌, ಜಾಕ್ವೆಲಿನ್‌ ಫೆರ್ನಾಂಡಿಸ್‌ ಸಕತ್ ಸ್ಟೆಪ್ಸ್ ಹಾಕಿದ್ದು, ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ.

ಸಿನಿಮಾದ ಬಹುತೇಕ ದೃಶ್ಯವನ್ನು ಕತ್ತಲ ವಾತಾವರಣದಲ್ಲಿ ಸೆರೆಹಿಡಿಯಲಾಗಿದ್ದು, ಕಥೆ, ಸಾಹಸ ದೃಶ್ಯ, ಛಾಯಾಗ್ರಹಣ ಎಲ್ಲವೂ ಉತ್ತಮವಾಗಿದ್ದು, ಕ್ಲೈಮ್ಯಾಕ್ಸ್ ಥ್ರಿಲ್ಲಿಂಗ್ ಆಗಿದೆ. ಇನ್ನು, ಸರಣಿ ಕೊಲೆಗಳ ರಹಸ್ಯವನ್ನು ವಿಕ್ರಾಂತ್ ರೋಣ ಹೇಗೆ ಭೇದಿಸುತ್ತಾನೆ ಎನ್ನುವುದೇ ವಿಕ್ರಾಂತ್ ರೋಣ ಸಿನಿಮಾದ ಕಥೆಯಾಗಿದೆ.

Vijayaprabha Mobile App free

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ & ಇಂಗ್ಲೀಷ್‌ ಭಾಷೆಗಳಲ್ಲಿ ವಿಕ್ರಾಂತ್ ರೋಣ ಚಿತ್ರ ರಿಲೀಸ್‌ ಆಗಿದ್ದು, ಕಿಚ್ಚ ಸುದೀಪ್‌, ಜಾಕ್ವೆಲಿನ್‌ ಫೆರ್ನಾಂಡಿಸ್‌, ರವಿಶಂಕರ್‌ ಗೌಡ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. Rating: 3/5

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.