Life insurance : ಜೀವ ವಿಮೆ ಏಕೆ ಮುಖ್ಯ? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

Life insurance : ವಿಮೆಯೂ ಜೀವನಕ್ಕೆ ಒಂದು ರೀತಿಯ ಭದ್ರತೆ ಮತ್ತು ಸ್ಥಿರತೆಯನ್ನು ತರುತ್ತದೆ. ಕಾಯಿಲೆ ಬಿದ್ದಾಗ ಕೈಯಲ್ಲಿ ಹಣ ಇಲ್ಲದಿದ್ದರೂ ಆಸರೆಯಾಗುವ ಅಸ್ತ್ರವಾಗಿ ಇದು ಕೆಲಸ ಮಾಡಲಿದ್ದು, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ…

Life insurance

Life insurance : ವಿಮೆಯೂ ಜೀವನಕ್ಕೆ ಒಂದು ರೀತಿಯ ಭದ್ರತೆ ಮತ್ತು ಸ್ಥಿರತೆಯನ್ನು ತರುತ್ತದೆ. ಕಾಯಿಲೆ ಬಿದ್ದಾಗ ಕೈಯಲ್ಲಿ ಹಣ ಇಲ್ಲದಿದ್ದರೂ ಆಸರೆಯಾಗುವ ಅಸ್ತ್ರವಾಗಿ ಇದು ಕೆಲಸ ಮಾಡಲಿದ್ದು, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಜೀವ ವಿಮೆಯನ್ನು ಸಹ ಒದಗಿಸುತ್ತವೆ.

ಅವಶ್ಯಕತೆಗಳನ್ನು ಪರಿಶೀಲಿಸಿ

ಜೀವ ವಿಮೆಯನ್ನು ತೆಗೆದುಕೊಳ್ಳುವ ಮೊದಲು ಅವಶ್ಯಕತೆಗಳನ್ನು ಪರಿಶೀಲಿಸಿ. ಯಾವ ರೀತಿಯ ಕವರೇಜ್ ಉತ್ತಮವಾಗಿದೆ ಎಂಬುದನ್ನು ತಿಳಿಯಿರಿ. ಉದಾ: ಟರ್ಮ್ ಲೈಫ್ ಇನ್ಸೂರೆನ್ಸ್ ನಿಗದಿತ ಅವಧಿ (10 – 30 ವರ್ಷ)ಗೆ ಹಾಗೂ ಸಂಪೂರ್ಣ ಜೀವ ವಿಮೆ ಜೀವಿತಾವಧಿ ವ್ಯಾಪ್ತಿ ಒಳಗೊಂಡಿದೆ. ಈ ವ್ಯತ್ಯಾಸ ಅರ್ಥಮಾಡಿಕೊಂಡು ಆಯ್ಕೆ

ಇದನ್ನೂ ಓದಿ: Ration Card EKYC : ಪಡಿತರ ಚೀಟಿದಾರರೇ ಈ ಕೆಲಸ ಮಾಡದಿದ್ದಲ್ಲಿ ನಿಮ್ಮ ಪಡಿತರ ಬಂದ್‌

Vijayaprabha Mobile App free

Life insurance premium (ಪ್ರೀಮಿಯಂ)

ಜೀವ ವಿಮೆ ತೆಗೆದುಕೊಳ್ಳುವಾಗ ಪ್ರೀಮಿಯಂಗಳನ್ನು ಪರಿಗಣಿಸುವುದು ಬಹಳ ಮುಖ್ಯ. ವೆಚ್ಚವು ವಯಸ್ಸು, ಆರೋಗ್ಯ ಸ್ಥಿತಿ, ಕವರೇಜ್ ಮೊತ್ತ & ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಬಗ್ಗೆ ಯೋಚಿಸಿ, ಕಡಿಮೆ ವೆಚ್ಚದಲ್ಲಿ ಉತ್ತಮ ಯೋಜನೆ ಆರಿಸಿಕೊಳ್ಳಿ.

ವಿಮೆಯ ವಿಧಗಳು

  • ಆರೋಗ್ಯ ವಿಮೆ
  • ಅಪಘಾತ ವಿಮೆ
  • ಮಕ್ಕಳ ವಿಮಾ ಯೋಜನೆಗಳು
  • ಸಂಪೂರ್ಣ ಜೀವ ವಿಮೆ
  • ನಿವೃತ್ತಿ ಯೋಜನೆಗಳು
  • ಪಿಂಚಣಿ ಯೋಜನೆಗಳು
  • ಅವಧಿ ವಿಮೆ
  • ಯುನಿಟ್ ಲಿಂಕ್ಸ್‌ ವಿಮಾ ಯೋಜನೆಗಳು (ಯುಲಿಪ್ಸ್)
  • ದತ್ತಿ ಯೋಜನೆಗಳು

ಇದನ್ನೂ ಓದಿ: Ration card : ರೇಷನ್ ಕಾರ್ಡ್‌ನಲ್ಲಿ ಪತ್ನಿ, ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳು ಕಡ್ಡಾಯ; ಸೇರ್ಪಡೆ ಮಾಡುವುದು ಹೇಗೆ ಗೊತ್ತೇ?

Life insurance : ವಿಮಾ ಪಾಲಿಸಿಯನ್ನು ಖರಿದೀಸುವುದು ಹೇಗೆ?

ವಿಮಾ ಪಾಲಿಸಿಯನ್ನು ನೀವು ವೈಯಕ್ತಿಕ ಏಜೆಂಟ್, ಕಾರ್ಪೊರೇಟ್ ಏಜೆಂಟ್ ಅಥವಾ ಬೋಕರ್‌ ಮೂಲಕ ಖರೀದಿಸಬಹುದು. ನೀವು ವಿಮಾ ಕಂಪನಿಯ ಹತ್ತಿರದ ಶಾಖೆಯಿಂದ ನೇರವಾಗಿ ನಿಮ್ಮ ಪಾಲಿಸಿಯನ್ನು ಖರೀದಿಸಬಹುದು & ಕೆಲವನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.

Life insurance benefits (ಜೀವ ವಿಮಾ ಪ್ರಯೋಜನಗಳು )

ಜೀವ ವಿಮಾ ಪಾಲಿಸಿಗಳು ಸಾವಿನ ನಂತರದ ಪ್ರಯೋಜನವನ್ನು ಸಹ ನೀಡುತ್ತವೆ. ಪಾಲಿಸಿದಾರನ ಮರಣದ ನಂತರ ತೆರಿಗೆ ಇಲ್ಲದೇ ಫಲಾನುಭವಿಗಳಿಗೆ ವಿಮಾ ಮೊತ್ತ ಪಾವತಿಸಲಾಗುತ್ತದೆ. ಇದರಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆ ಇರುತ್ತದೆ. ನಿಮ್ಮ ಪಾಲಿಸಿಯಲ್ಲಿ ಅಂತಹ ಸೌಲಭ್ಯವಿದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.