Kannada temples | ಕನ್ನಡ ರಾಜ್ಯೋತ್ಸವ; ಕರ್ನಾಟಕದ ಟಾಪ್ 5 ಕನ್ನಡಮ್ಮನ ದೇಗುಲಗಳು ಇಲ್ಲಿವೆ

Kannada temples : ಮೈಸೂರು ಅರಮನೆಯಲ್ಲಿ ‘ಭುವನೇಶ್ವರಿ’ ಅರಮನೆಯ ಆವರಣದ ಉತ್ತರ ದ್ವಾರದ ಬಳಿ ದ್ರಾವಿಡ ಶೈಲಿಯ ಭುವನೇಶ್ವರಿ ದೇವಾಲಯವಿದೆ. ನಿತ್ಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 & ಸಂಜೆ 6 ರಿಂದ…

kannada temples

Kannada temples : ಮೈಸೂರು ಅರಮನೆಯಲ್ಲಿ ‘ಭುವನೇಶ್ವರಿ’

ಅರಮನೆಯ ಆವರಣದ ಉತ್ತರ ದ್ವಾರದ ಬಳಿ ದ್ರಾವಿಡ ಶೈಲಿಯ ಭುವನೇಶ್ವರಿ ದೇವಾಲಯವಿದೆ. ನಿತ್ಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 & ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೂ ದರ್ಶನಕ್ಕೆ ಅವಕಾಶವಿದೆ. ರಾಜ್ಯೋತ್ಸವದಂದು ದೇವಿಯ ಮೂಲ ಮೂರ್ತಿಗೆ ಬೆಳ್ಳಿ ಕವಚ ತೊಡಿಸಲಾಗುತ್ತದೆ.

Kannada temples : ಹಂಪಿಯಿಂದ ದಶದಿಕ್ಕಿಗೆ ಜ್ಯೋತಿ

11ನೇ ಶತಮಾನದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿ ಭುವನೇಶ್ವರಿ ದೇವಿ ದೇಗುವ ನಿರ್ಮಿಸಲಾಗಿದೆ. ಭುವನೇಶ್ವರಿಯನ್ನು ‘ಕರ್ನಾಟಕದ ಕುಲದೇವತೆ’ ಎ೦ದು ಕರೆಯಲಾಗುತ್ತಿದ್ದು, ರಾಜ್ಯೋತ್ಸವದಂದು ದಶದಿಕ್ಕುಗಳಿಗೆ ಜ್ಯೋತಿ ಬೆಳಗಿಸಿಕೊಂಡು ಹೋಗುವ ವಿಶಿಷ್ಟ ಪರಂಪರೆ ದಶಕಗಳಿಂದ ಆಚರಣೆಯಲ್ಲಿದೆ.

ಇದನ್ನೂ ಓದಿ: Kannada Flag | ಇಂದು ಕನ್ನಡ ರಾಜ್ಯೋತ್ಸವ; ಕನ್ನಡ ಧ್ವಜದ ಕುತೂಹಲಕಾರಿ ಸಂಗತಿಗಳು

Vijayaprabha Mobile App free

Kannada temples : ಭುವನಗಿರಿಯ ಮೇಲೆ ಕನ್ನಡಾಂಬೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಕನ್ನಡ ತಾಯಿ ಭುವನೇಶ್ವರಿ ನೆಲೆಸಿರುವ ತಾಣವಾಗಿದ್ದು, ಕಣ್ಣು ಹಾಯುವವರೆಗೂ ಕಾಣುವ ಗಿರಿಶ್ರೇಣಿಗಳು, ಎತ್ತರದ ಬೆಟ್ಟದ ಮೇಲೆ ಈ ದೇಗುಲವಿದೆ. ವಿಜಯನಗರದ ಅರಸರ ಸಾಮಂತ ಬಸವೇಂದ್ರ, 1692ರಲ್ಲಿ ಇಲ್ಲಿ ದೇಗುಲ & ಪುಷ್ಕರಣಿ ನಿರ್ಮಿಸಿದ್ದ ಎನ್ನುವ ಇತಿಹಾಸವಿದೆ.

ದೇವಿಯ ಪಟಕ್ಕೆ ನಿತ್ಯ ಪೂಜೆ

ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ 1953ರಲ್ಲಿ ನಿರ್ಮಿಸಿದ ಆರು ಅಡಿ ಎತ್ತರದ ಭುವನೇಶ್ವರಿಯ ಮೊದಲ ತೈಲವರ್ಣ ಚಿತ್ರವಿದ್ದು, ಗದುಗಿನ ಅಂದಾನಪ್ಪ ದೊಡ್ಡಮೇಟಿ ಅವರು ರಚಿಸಿದ ‘ಕರ್ಣಾಟಕ ಮಹಿಮ್ನಃಸ್ತೋತ್ರ’ವೇ ತೈಲವರ್ಣ ಚಿತ್ರ ರಚಿಸಲು ಪ್ರೇರಣೆ ಎನ್ನಲಾಗಿದೆ.

ಇದನ್ನೂ ಓದಿ: Kannada Rajyotsava : ಇಂದು ಕನ್ನಡ ರಾಜ್ಯೋತ್ಸವ ಆಚರಣೆ; ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕ

ರಾಜಧಾನಿಯಲ್ಲಿ ನಾಡದೇವತೆ

ಬೆಂಗಳೂರಿನ ಹೆಬ್ಬಾಳದ ಕೆಂಪಾಪುರ ಬಳಿ ಭುವನೇಶ್ವರಿ ದೇಗುಲವಿದೆ. ಇಂದಿರಾನಗರದ ದೂಪನಹಳ್ಳಿಯಲ್ಲಿ 1991 ರಲ್ಲಿ ಭುವನೇಶ್ವರಿ ದೇವಿ ದೇವಸ್ಥಾನ ಸ್ಥಾಪನೆಯಾಗಿದೆ. ಈ ದೇವಸ್ಥಾನದ ಸುತ್ತಲೂ ಒಳ್ಳೆಯ ಶಿಲಾಕೆತ್ತನೆಯಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.