Kannada Rajyotsava Award : ಕನ್ನಡ & ಸಂಸ್ಕೃತಿ ಇಲಾಖೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಈ ಬಾರಿ ಬರೋಬ್ಬರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಇಬ್ಬರು ಚಲನಚಿತ್ರ ರಂಗದ ಸಾಧಕರನ್ನು ಸಹ ಗುರುತಿಸಲಾಗಿದೆ.
ಹೌದು, ನವಂಬರ್ 1ರಂದು ನಡೆಯಲಿರೋ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು (Kannada Rajyotsava Award) ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕುರಿತು ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ , ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು, ಸೇವಾ ಸಿಂಧೂ ಮೂಲಕ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದು, ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Diwali Lakshmi Puja | ಇಂದು ದೀಪಾವಳಿ, ಲಕ್ಷ್ಮಿ ಪೂಜೆ ಹೀಗೆ ಮಾಡಿ; ದೇವಿ ಕೃಪೆಗೆ ಪಾತ್ರರಾಗಿ
Kannada Rajyotsava Award ಚಿತ್ರರಂಗದ ಇಬ್ಬರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕನ್ನಡ & ಸಂಸ್ಕೃತಿ ಇಲಾಖೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಇದರಲ್ಲಿ ಇಬ್ಬರು ಚಲನಚಿತ್ರ ರಂಗದ ಸಾಧಕರನ್ನು ಸಹ ಗುರುತಿಸಲಾಗಿದೆ.
ಹೌದು, ಆಂಧ್ರ ಪ್ರದೇಶ ಮೂಲದವರಾದರೂ ಕನ್ನಡದ ನೂರಾರು ಸಿನಿಮಾಗಳಲ್ಲಿ & ಕೆಲ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ ಹೇಮಾ ಚೌಧರಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ & ಬರಹಗಾರ ಎಂಎಸ್ ನರಸಿಂಹಮೂರ್ತಿ ಅವರಿಗೆ ಚಲನಚಿತ್ರ/ಕಿರುತೆರೆ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Kannada Rajyotsava Award ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024ರ ಪಟ್ಟಿ
1. ಇಮಾಮಸಾಬ ಎಮ್ ವಲ್ಲೆಪನವರ – ಧಾರವಾಡ
2. ಅಶ್ವ ರಾಮಣ್ಣ – ಬಳ್ಳಾರಿ
3. ಕುಮಾರಯ್ಯ – ಹಾಸನ
4. ವೀರಭದ್ರಯ್ಯ – ಚಿಕ್ಕಬಳ್ಳಾಪುರ
5. ನರಸಿಂಹಲು (ಅಂಧ ಕಲಾವಿದ) – ಬೀದರ್
6. ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ.
7. ಎಸ್ಜಿ ಲಕ್ಷ್ಮೀದೇವಮ್ಮ – ಚಿಕ್ಕಮಗಳೂರು
8. ಪಿಚ್ಚಳ್ಳಿ ಶ್ರೀನಿವಾಸ – ಕೋಲಾರ
9. ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ ಚಲನಚಿತ್ರ /ಕಿರುತೆರೆ
10. ಹೇಮಾ ಚೌದರಿ – ಬೆಂಗಳೂರು ನಗರ
11. ಎಂಎಸ್ ನರಸಿಂಹಮೂರ್ತಿ – ಬೆಂಗಳೂರು ನಗರ ಸಂಗೀತ
12. ಪಿ ರಾಜಗೋಪಾಲ – ಮಂಡ್ಯ
13. ಎ.ಎನ್ ಸದಾಶಿವಪ್ಪ – ರಾಯಚೂರು ನೃತ್ಯ
14. ವಿದುಷಿ ಲಲಿತಾ ರಾವ್ – ಮೈಸೂರು ಆಡಳಿತ
15. ಎಸ್ವಿ ರಂಗನಾಥ್ ಭಾ.ಆ.ಸೇ (ನಿ) (ವೈದ್ಯಕೀಯ ) – ಬೆಂಗಳೂರು ನಗರ.
16. ಡಾ. ಜಿಬಿ ಬಿಡಿನಹಾಳ – ಗದಗ
17. ಡಾ. ಮೈಸೂರು ಸತ್ಯನಾರಾಯಣ (ವೈದ್ಯಕೀಯ) – ಮೈಸೂರು
18. ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ – ವಿಜಯಪುರ ಸಮಾಜಸೇವೆ;
ಇದನ್ನೂ ಓದಿ: Deepavali : ಐದು ದಿನದ ದೀಪಾವಳಿ ಆಚರಣೆ ಮಹತ್ವ, ಪೂಜಾ ಸಮಯ
19. ವೀರಸಂಗಯ್ಯ – ವಿಜಯನಗರ
20. ಹೀರಾಚಂದ್ ವಾಗ್ಮಾರೆ – ಬೀದರ್
21. ಮಲ್ಲಮ್ಮ ಸೂಲಗಿತ್ತಿ – ರಾಯಚೂರು
22. ದಿಲೀಪ್ ಕುಮಾರ್ – ಚಿತ್ರದುರ್ಗ ಸಂಕೀರ್ಣ
23. ಹುಲಿಕಲ್ ನಟರಾಜ – ತುಮಕೂರು
24. ಡಾ. ಹೆಚ್ಆರ್ ಸ್ವಾಮಿ – ಚಿತ್ರದುರ್ಗ
25. ಆ.ನ ಪ್ರಹ್ಲಾದ ರಾವ್ – ಕೋಲಾರ
26. ಕೆ ಅಜೀತ್ ಕುಮಾರ್ ರೈ – ಬೆಂಗಳೂರು
27. ಇರ್ಫಾನ್ ರಜಾಕ್ (ವಾಸ್ತುಶಿಲ್ಪ) – ಬೆಂಗಳೂರು
28. ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ ಹೊರದೇಶ-ಹೊರನಾಡು;
29. ಕನ್ಹಯ್ಯ ನಾಯ್ಡು –
30. ಡಾ. ತುಂಬೆ ಮೊಹಿಯುದ್ದೀನ್ – ತುಂಬೆ ಗ್ರೂಪ್ಸ್ ಯುಎಇ
31. ಚಂದ್ರಶೇಖರ ನಾಯಕ್ – ಅಮೆರಿಕ, ಪರಿಸರ;
32. ಆಲ್ಮಿತಾ ಪಟೇಲ್ – ಬೆಂಗಳೂರು ನಗರ ಸಾಹಿತ್ಯ;
33. ಬಿಟಿ ಲಲಿತಾ ನಾಯಕ್ – ಚಿಕ್ಕಮಗಳೂರು
34. ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
35. ಡಾ.ಎಂ ವೀರಪ್ಪ ಮೊಯ್ಲಿ – ಉಡುಪಿ
36. ಹನುಮಂತರಾವ್ ದೊಡ್ಡಮನಿ – ಕಲಬುರಗಿ
37. ಡಾ.ಬಾಳಾಸಾಹೇಬ್ ಲೋಕಾಪುರ – ಬೆಳಗಾವಿ.
38. ಬೈರಮಂಗಲರಾಮೇಗೌಡ – ರಾಮನಗರ
39. ಡಾ. ಪ್ರಶಾಂತ್ ಮಾಡ್ತಾ – ದಕ್ಷಿಣ ಕನ್ನಡ, ಕೃಷಿ;
40. ಶಿವನಾಪುರ ರಮೇಶ – ಬೆಂಗಳೂರು ಗ್ರಾಮಾಂತರ
41. ಪುಟ್ಟೀರಮ್ಮ – ಚಾಮರಾಜನಗರ ಮಾಧ್ಯಮ;
42. ಎನ್ಎಸ್ ಶಂಕರ್ – ದಾವಣಗೆರೆ
43. ಸನತ್ಕುಮಾರ್ ಬೆಳಗಲಿ – ಬಾಗಲಕೋಟೆ
44. ಎಜಿ ಕಾರಟಗಿ (ಅಮರ ಗುಂಡಪ್ಪ ಕಾರಟಗಿ) – ಕೊಪ್ಪಳ ಇವರಿಗೆ
45. ರಾಮಕೃಷ್ಣ ಬಡಕೇಶಿ – ಕಲಬುರಗಿ, ವಿಜ್ಞಾನ-ತಂತ್ರಜ್ಞಾನ
46. ಟಿವಿ ರಾಮಚಂದ್ರ – ಬೆಂಗಳೂರು ನಗರ
47. ಸುಬ್ಬಯ್ಯ ಅರುಣನ್ – ಬೆಂಗಳೂರು ನಗರ
48. ವೀರೂಪಾಕ್ಷಪ್ಪ ನೇಕಾರ – ಬಳ್ಳಾರಿ, ಯಕ್ಷಗಾನ
49. ಕೇಶವ್ ಹೆಗಡೆ – ಉತ್ತರ ಕನ್ನಡ,
50. ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ ಬಯಲಾಟ
51. ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು) – ಬಾಗಲಕೋಟೆ
52. ನಾರಾಯಣಪ್ಪ ಶಿಳ್ಳೆಕ್ಯಾತ – ವಿಜಯನಗರ ರಂಗಭೂಮಿ
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
53. ಸರಸ್ವತಿ ಜುಲೈಕ ಬೇಗಂ – ಯಾದಗಿರಿ
54. ಓಬಳೇಶ್ ಹೆಚ್ಬಿ – ಚಿತ್ರದುರ್ಗ
55. ಭಾಗ್ಯಶ್ರೀ ರವಿ – ಕೋಲಾರ
56. ಡಿ ರಾಮು – ಮೈಸೂರು
57. ಜನಾರ್ಧನ ಎಚ್ – ಮೈಸೂರು
58. ಹನುಮಾನದಾಸ ವ ಪವಾರ – ಬಾಗಲಕೋಟೆ
59. ವಿ ಕಮಲಮ್ಮ – ಬೆಂಗಳೂರು ನಗರ
60. ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
61. ಪದ್ಮಾ ಶೇಖರ್ – ಕೊಡಗು ಕ್ರೀಡೆ
62. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ) – ಬೆಂಗಳೂರು ನಗರ
63. ಗೌತಮ್ ವರ್ಮಾ – ರಾಮನಗರ
64. ಆರ್ ಉಮಾದೇವಿ (ಬಿಲಿಯಡ್ಸ್) – ಬೆಂಗಳೂರು ನಗರ ನ್ಯಾಯಾಂಗ
65. ಬಾಲನ್ – ಕೋಲಾರ ಶಿಲ್ಪಕಲೆ
66. ಬಸವರಾಜ್ ಬಡಿಗೇರ – ಬೆಂಗಳೂರು ನಗರ
67. ಅರುಣ್ ಯೋಗಿರಾಜ್ – ಮೈಸೂರು
68. ಪ್ರಭು ಹಸರೂರು – ತುಮಕೂರು ಕರಕುಶಲ
69. ಚಂದ್ರಶೇಖರ ಸಿರಿವಂತೆ – ಶಿವಮೊಗ್ಗ