ಮುಂಬೈ: ಇಂದು ಮುಂಬೈ ವಾಂಖಡೆ ಸ್ಟೇಡಿಯಂ ನಲ್ಲಿ ಐಪಿಎಲ್ 14ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಎದುರಾಗಲಿವೆ.
ಉಭಯ ತಂಡಗಳಿಗೆ ಇದು ಮೂರನೇ ಪಂದ್ಯವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಚೆನ್ನೈ ಮತ್ತು ರಾಜಸ್ಥಾನ್ ತಂಡಗಳು ಇಂದು ತಮ್ಮ ಜಯದ ಲಯವನ್ನು ಕಾಯ್ದುಕೊಳ್ಳುವ ಹುಮ್ಮಸ್ಸಿನಿಂದ ಮೈದಾನಕ್ಕಿಳಿಯಲಿವೆ. ಉಭಯ ತಂಡಗಳು ಈವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 14ರಲ್ಲಿ ಮತ್ತು ರಾಜಸ್ಥಾನ್ 9 ರಲ್ಲಿ ಜಯ ಗಳಿಸಿದೆ.
ತಂಡಗಳ ಸಂಭಾವ್ಯ ಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ರುತುರಾಜ್ ಗೈಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಸ್ಯಾಮ್ ಕುರ್ರನ್, ಎಂ.ಎಸ್. ದೋನಿ(ನಾಯಕ/ವಿಕೆಟ್ ಕೀಪರ್), ಕರ್ನ್ ಶರ್ಮಾ, ಇಮ್ರಾನ್ ತಾಹಿರ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಜಿಡಿ, ಮಿಚೆಲ್ ಸ್ಯಾಂಟ್ನರ್, ರವಿಸ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಸನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ.
ರಾಜಸ್ಥಾನ್ ರಾಯಲ್ಸ್ ಸ್ಕ್ವಾಡ್: ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಶಿವಮ್ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್, ಆಂಡ್ರ್ಯೂ ಟೈ, ಶ್ರೇಯಾಸ್ ಗೋಪಾಲ್, ಲಿವಿಂಗ್ಸ್ಟೋನ್, ಕೆ.ಸಿ.ಕರಿಯಪ್ಪ, ಮಹಿಪಾಲ್ ಲೋಮರ್, ಮಾಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಆಕಾಶ್ ಸಿಂಗ್.