ಮಲೇರಿಯಾ ಜ್ವರದ ಲಕ್ಷಣಗಳು:
*ಹೆಚ್ಚು ಜ್ವರ ಹಾಗು ಮೈ ನಡುಗುತ್ತದೆ ಮತ್ತು ನಂತರದಲ್ಲಿ ತಲೆನೋವು ವಿಪರೀತವಾಗಿ ಕಾಡುತ್ತದೆ.
* ಅತಿಯಾದ ಜ್ವರ ಸಮಸ್ಯೆ ಎರಡು ಮೂರು ದಿನಗಳಿಂದ ಇದ್ದವರಿಗೆ ಹೊರಗಿನ ವಾತಾವರಣ ಚಳಿ ಎನಿಸುತ್ತದೆ. ಇದರಿಂದ ಮೈ ನಡುಗುತ್ತದೆ.
*ಇನ್ನು ಚಳಿಯಿಂದ ಮೈ ನಡುಗುತ್ತಿದ್ದರು ಸಹ ಅತಿಯಾಗಿ ಮೈ ಬೆವರುತ್ತದೆ.
* ಜ್ವರ, ತಲೆನೋವು ಇರುವವರಿಗೆ ವಿಪರೀತ ದೇಹದ ಆಯಾಸ ಕೂಡ ಕಂಡುಬರುವುದಲ್ಲದೆ, ಹೆಚ್ಚು ಸುಸ್ತು ಮತ್ತು ಹೊಟ್ಟೆ ಹಸಿವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
*ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ.
ಮಲೇರಿಯಾಗೆ ಮನೆಮದ್ದು:
ಕಬ್ಬಿನ ಹಾಲು: ದಿನದಲ್ಲಿ 2 ಸಲ ಕಬ್ಬಿನ ಹಾಲು ಕುಡಿಯಿರಿ. ಆಂಟಿಆಕ್ಸಿಡೆಂಟ್ ಗುಣ ಹೊಂದಿರುವ ಇದು ಮಲೇರಿಯಾ ವಿರುದ್ಧ ಹೋರಾಡಲು ಉತ್ತಮ ಮನೆಮದ್ದು.
ತುಳಸಿ: ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ, ಇದರ ಕಷಾಯವನ್ನು ಸೇವಿಸಬಹುದು. ಇದು ಸಹ ಮಲೇರಿಯಾಗೆ ಒಳ್ಳೆಯ ಮನೆಮದ್ದು.
ಮೆಂತ್ಯೆ: ಮೆಂತ್ಯೆ ಪ್ರತಿರೋಧಕ ಶಕ್ತಿ ವೃದ್ಧಿಸಿ, ಮಲೇರಿಯಾ ಪರಾವಲಂಬಿ ವಿರುದ್ಧ ಹೋರಾಡಲು ಸಹಕರಿಸುತ್ತದೆ. ರಾತ್ರಿ ಸ್ವಲ್ಪ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ನೀರು ಕುಡಿಯಿರಿ.