Home Loan : ಗೃಹ ಸಾಲ ಎಂದರೆ ವ್ಯಕ್ತಿ ತನ್ನ ಕನಸಿನ ಮನೆ ನಿರ್ಮಾಣ ಅಥವಾ ಪುನರ್ನಿರ್ಮಾಣಕ್ಕಾಗಿ ಬ್ಯಾಂಕುಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಳ್ಳುವ ಸಾಲ. ಇದರಲ್ಲಿ ಮುಖ್ಯವಾಗಿ ಸಾಲವನ್ನು ತೆಗೆದುಕೊಳ್ಳುತ್ತಿರುವ ಮನೆಯನ್ನೇ ಸಾಲದಾತನು ಮೇಲಾಧಾರವಾಗಿ ಇರಿಸುತ್ತಾನೆ.
ಹೌದು, ಈ ಸಾಲವನ್ನು ಪ್ರತಿ ತಿಂಗಳು ಕಂತುಗಳ ಮುಖಾಂತರ ಬ್ಯಾಂಕುಗಳಿಗೆ ಹಿಂತಿರುಗಿಸಲಾಗುತ್ತದೆ. ಸಾಮಾನ್ಯ ಜನರಿಗೆ ಕೈಗೆಟುಕುವ ಬಡ್ಡಿ ದರದಲ್ಲಿ ಸಿಗುತ್ತಿರುವ ಗೃಹ ಸಾಲವು ಬಡವರಿಗೆ ಮತ್ತು ಮನೆ ಕಟ್ಟಿ ಆರ್ಥಿಕ ಸಮಸ್ಯೆಯಿಂದ ಎದುರಿಸುತ್ತಿರುವವರಿಗೆ ಇದು ತುಂಬಾ ಸಹಾಯಕಾರಿಯಾಗಿದೆ.
ಕನಸಿನ ಮನೆಗಾಗಿ ಗೃಹ ಸಾಲ ಪಡೆಯುವ ಮುನ್ನ ಗಮನದಲ್ಲಿರಲಿ ಈ ಮಾಹಿತಿ (Keep in Mind Before Getting a Home Loan)
ಒಂದು ಮನೆ ಖರೀದಿಸುವುದು ಹಾಗೂ ಕಟ್ಟುವುದು ಪ್ರತಿಯೊಬ್ಬ ಮನುಷ್ಯನ ಕನಸಾಗಿರುತ್ತದೆ. ಕೆಲವರು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಹೆಚ್ಚಿನ ಬಡ್ಡಿದರಕ್ಕೆ ಒಳಗಾಗುತ್ತಾರೆ.
ಕ್ರೆಡಿಟ್ ಸ್ಕೋರ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ತುಂಬಾ ಮುಖ್ಯವಾಗಿದ್ದು, 750-800 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಮಾತ್ರವಲ್ಲ, ಮತ್ತು ನೀವು ಸಾಲವನ್ನು ಮರುಪಾವತಿಸುವವರೆಗೂ ಆ ಸ್ಕೋರ್ ಅನ್ನು ಕಾಪಾಡಿಕೊಳ್ಳಬೇಕು.
ಇದನ್ನೂ ಓದಿ: Post Office Savings Scheme | ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಹೇಗೆ ಪ್ರಾರಂಭವಾಯಿತು? ಹೇಗೆ ಕಾರ್ಯನಿರ್ವಹಿಸುತ್ತದೆ?
ಗೃಹ ಸಾಲಕ್ಕೆ ಬೇಕಾಗಿರುವ ದಾಖಲೆಗಳು (Documents required for home loan)
ಮನೆ ಕಟ್ಟುವುದಕ್ಕೆ ಗೃಹ ಸಾಲ ಪಡೆಯುವ ಚಿಂತನೆಯಲ್ಲಿದ್ದರೆ ಮೊದಲು ಅವಶ್ಯಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಈ ಮೂಲಕ ಅಂತಿಮ ಕ್ಷಣದ ಆತುರದ ಅವಾಂತರವನ್ನು ತಡೆಯಬಹುದು.
ಹೌದು, ಅರ್ಜಿದಾರ ಮತ್ತು ಸಹ ಅರ್ಜಿದಾರನ ಭಾವಚಿತ್ರಗಳು, ಇಬ್ಬರ ಆದಾಯ ದೃಢೀಕರಣ ಪತ್ರ, ಪಾನ್ ಮತ್ತು ಐಡಿ ಪ್ರೂಫ್, ವೇತನದಾರರಾಗಿದ್ದರೆ ಕೆಲವು ತಿಂಗಳಿಂದ ಇಲ್ಲಿನ ತನಕದ ಪೇ ಸ್ಲಿಪ್‌ಗಳು, ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಇತ್ತೀಚಿನ ಫಾರ್ಮ್ 16 ನೀಡಬೇಕಾಗುತ್ತದೆ. ಈ ದಾಖಲೆಗಳಿದ್ದರೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಸುಲಭವಾಗುತ್ತದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಕುಸುಮ್ ಯೋಜನೆ | ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಪ್ರಯೋಜನಗಳು, ಅರ್ಜಿ ಸಲ್ಲಿಕೆ
ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆಯುವಾಗ ಈ ವಿಷಯಗಳನ್ನು ಮರೆಯಬೇಡಿ..!
ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹೌದು, ಇಎಂಐ ಮೂಲಕ ಸಾಲ ಮರುಪಾವತಿ ಮಾಡುವಾಗ ಎಷ್ಟು ಅಸಲಿಗೆ ಎಷ್ಟು ಬಡ್ಡಿ ಇರುತ್ತದೆ ಎಂಬುದನ್ನು ತಿಳಿದುಕೊಂಡು ನಂತರ ನಿರ್ಧಾರ ಮಾಡುವುದು ಸೂಕ್ತ.
ಎಲ್ಲಾ ಬ್ಯಾಂಕಿನಲ್ಲಿ ಹೋಂ ಲೋನ್ ಪಡೆಯಬಹುದು. ಆದರೆ, ಆದಾಯ, ಮರುಪಾವತಿಯ ಸಾಮರ್ಥ್ಯ, ವೆಚ್ಚಗಳ ಬಗ್ಗೆ ಗಮನಿಸಿ ಬ್ಯಾಂಕ್ಗಳು ಸಾಲ ನೀಡುತ್ತವೆ. ನೀವು ಕೆಲವು ಬ್ಯಾಂಕ್ ಗಳ ಬಗ್ಗೆ ಅಧ್ಯಯನ ನಡೆಸಿ ನಂತರ ಸೂಕ್ತ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.
ಇದನ್ನೂ ಓದಿ: Equity Mutual Fund | ಈಕ್ವಿಟಿ ಫಂಡ್ ಎಂದರೇನು? ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಯೋಜನಗಳೇನು
ಭಾರತದ ಐದು ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ (Home loan at low interest)
ನೀವೀಗ ಮನೆ ಕಟ್ಟುವ ಯೋಜನೆಯಲ್ಲಿದ್ದರೆ, ಅದಕ್ಕಾಗಿ ಹಣ ಹೊಂದಿಸಲು ಗೃಹಸಾಲ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಿದ್ದರೆ, ಈ 5 ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಗೆ ಗೃಹ ಸಾಲ ಸಿಗುತ್ತಿದೆ.
ಹೌದು, ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲಕ್ಕೆ ಕನಿಷ್ಠ ಬಡ್ಡಿ ಇದೆ. ಎಚ್‌ಡಿಎಫ್‌ಸಿ, ಐಸಿಐಸಿ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಇನ್ನೂ ಹಲವು ಬ್ಯಾಂಕುಗಳು ಪ್ರಸ್ತುತ ವಾರ್ಷಿಕ ಶೇ. 8.60ಯಿಂದ ಶೇ. 9.45ರಷ್ಟು ಬಡ್ಡಿಯಲ್ಲಿ ಗೃಹ ಸಾಲವನ್ನು ನೀಡುತ್ತದೆ.
ವಿಡಿಯೋ ಕೃಪೆ – Zee Kannada News