ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಫಾಸ್ಟ್ ಯುಗದಲ್ಲಿ ಡ್ರೋನ್ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಬಹುತೇಕ ಪ್ರತಿಯೊಂದು ಕ್ಷೇತ್ರವನ್ನು ಆವರಿಸುತ್ತಿದೆ.
ಸಿನಿಮಾ, ಫೋಟೋಗ್ರಫಿ, ವಿಡಿಯೋ, ಕೃಷಿ, ಸರ್ವೇ ಕಾರ್ಯ, ವಿವಿಧ ಹಂತದಲ್ಲಿ ತನಿಖೆ ಹೀಗೆ ಪ್ರತಿಯೊಂದರಲ್ಲೂ ಅತಿ ಸೂಕ್ಷ್ಮದಲ್ಲೂ ಪರಿಣಾಮಕಾರಿ ಆಗಿದೆ ಡ್ರೋನ್. ಇಂಥ ಒಂದು ಡ್ರೋನ್ ತರಬೇತಿಗೆ (Drone Training) ಈಗ ಸಮಾಜ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಫೋಟೋಗ್ರಫಿ, ವಿಡಿಯೋಗ್ರಫಿಗೆ:
2024-25ನೇ ಸಾಲಿನ ಡ್ರೋನ್ ಆಧಾರಿತ ಪೋಟೋಗ್ರಫಿ ಹಾಗೂ ವಿಡಿಯೋಗ್ರಫಿಗೆ ಸಮಾಜ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಸಾಮಾಜಿಕ ಜಾಲ ತಾಣದಲ್ಲಿ ಉದ್ಯೋಗಕ್ಕೆ ಅನುಕೂಲ:
ಸಾಮಾಜಿಕ ಜಾಲ ತಾಣದಲ್ಲಿ ಉದ್ಯೋಗ ಪಡೆಯುವವರಿಗೆ ಅನುಕೂಲ ಆಗಲೆಂದು ಈ ಡ್ರೋನ್ ತರಬೇತಿ ಹಮ್ಮಿಕೊಂಡಿದೆ ಇಲಾಖೆ.
ಡ್ರೋನ್ ತರಬೇತಿಗೆ ಯಾರು ಅರ್ಹರು:
ಪರಿಶಿಷ್ಟ ಪಂಗಡದ ಯುವಕ ಮತ್ತು ಯುವತಿಯರು ಈ ಡ್ರೋನ್ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು. 35 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಮತ್ತು 40 ವರ್ಷದೊಳಗಿನ ಮಹಿಳೆಯರು ಅರ್ಹರು.
ಡ್ರೋನ್ ತರಬೇತಿಗಾಗಿ ಯಾರಿಗೆಲ್ಲ ಆದ್ಯತೆ:
ಮೂಲನಿವಾಸಿಗಳು, ಅಲೆಮಾರಿ-ಅರೆ ಅಲೆಮಾರಿ, ಸೂಕ್ಷ್ಮ -ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡ ಸಮುದಾಯದ ಯುವಕ/ ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗುವುದು.
ಡ್ರೋನ್ ತರಬೇತಿ ಪಡೆಯುವ ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಸಲ್ಲಿಸಬಹುದು.
ಡ್ರೋನ್ ತರಬೇತಿ ಅರ್ಜಿ ಸಲ್ಲಿಕೆಗೆ ನಾಡಿದ್ದೆ ಲಾಸ್ಟ್ :
ಡ್ರೋನ್ ಆಧಾರಿತ ಫೋಟೋಗ್ರಫಿ, ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಸಲ್ಲಿಕೆಗೆ ನಾಡಿದ್ದೇ ಲಾಸ್ಟ್ ಡೇಟ್. ಡಿಸೆಂಬರ್ 23 ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬೇಕು.
ಡ್ರೋನ್ ತರಬೇತಿಗಾಗಿ ಎಲ್ಲಿಗೆ ಸಲ್ಲಿಸಬೇಕು:
ಅರ್ಜಿ ಸಲ್ಲಿಸಲು ಬಯಸುವವರು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲೂಕು, ಎಸ್. ಕರಿಯಪ್ಪ ರಸ್ತೆ, ಕನಕಪುರ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು-70 ಇಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26711096 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ದಕ್ಷಿಣ ತಾಲೂಕು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.