ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನಿವಾಸಿಗಳು ಅವರ ಆದಾಯ ಮತ್ತು ಮೂಲ ಸೌಕರ್ಯಗಳ ಆದಾರದ ಮೇಲೆ ರಾಜ್ಯ ಸರ್ಕಾರ ವಿವಿಧ ಪಡಿತರ ಚೀಟಿಗಳನ್ನು (Ration Card) ನೀಡುತ್ತದೆ. ರಾಜ್ಯದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ ನೋಡಣ
ಸರ್ಕಾರ ರಾಜ್ಯದಲ್ಲಿ ವಾಸಿಸುವ ನಿವಾಸಿಗಳಿಗೆ, PHH (ಆದ್ಯತೆಯ ಮನೆಗಳು) ಪಡಿತರ ಚೀಟಿಗಳು, ಅನ್ನಪೂರ್ಣ ಯೋಜನಾ ಪಡಿತರ ಚೀಟಿಗಳು, ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳು ಹಾಗು NPHH (ಆದ್ಯತೆಯಿಲ್ಲದ ಮನೆಗಳು) ಪಡಿತರ ಚೀಟಿಗಳನ್ನು ನೀಡುತ್ತದೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!
ಪಡಿತರ ಚೀಟಿಗಳ PHH ವರ್ಗವನ್ನು ಅನ್ನಪೂರ್ಣ ಯೋಜನಾ, ಅಂತ್ಯೋದಯ ಅನ್ನ ಯೋಜನೆ ಎರಡು ಉಪಗುಂಪುಗಳಾಗಿ ವಿಂಗಡಿಸಲಾಗಿದ್ದು, ಈ ಪಡಿತರ ಚೀಟಿಯು ಪ್ರತಿ ತಿಂಗಳು ಆಹಾರ ಮತ್ತು ಇತರ ಅಗತ್ಯಗಳನ್ನು ಹೊಂದಿರುವವರಿಗೆ ಅರ್ಹವಾಗಿದೆ. ಆದ್ಯತೆ ಪಡಿತರ ಚೀಟಿ ಇರುವವರು ಪ್ರತಿ ಕಿಲೋಗ್ರಾಂ ಅಕ್ಕಿಗೆ ರೂ 3, ಪ್ರತಿ ಕೆಜಿ ಗೋಧಿಗೆ ರೂ 2 ಮತ್ತು ಪ್ರತಿ ಕೆಜಿ ಎಣ್ಣೆಗೆ ರೂ 1 ಪಡೆಯುತ್ತಾರೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಅಕ್ಕಿ ಜೊತೆಗೆ ಇದೂ ಫ್ರಿ..!
ಪಡಿತರ ಚೀಟಿಗೆ (Ration Card) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಬಿಪಿಎಲ್ ಕಾರ್ಡ್ (BPL CARD) ಪಡೆಯುವುದು ಹೇಗೆ
ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ.
ಆಹಾರ ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್ ಹೋಗಿ, ಇ-ಸೇವೆಗಳು’ (E Service) ಟ್ಯಾಬ್‌ಗೆ ಹೋಗಿ.
ಇ-ರೇಷನ್ ಕಾರ್ಡ್‌ನಿಂದ ಹೊಸ ಪಡಿತರ ಚೀಟಿಯನ್ನು (New Ration card) ಆಯ್ಕೆ ಮಾಡಿಕೊಂಡು, “ಹೊಸ ಪಡಿತರ ಚೀಟಿ ವಿನಂತಿ” ಕ್ಲಿಕ್ ಮಾಡಿ
ಆಗ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಬಲಭಾಗದಲ್ಲಿ ತೆರೆಯುತ್ತದೆ. ಮುಂದುವರೆಸಲು 2 ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಕ್ಲಿಕ್ ಮಾಡಿ. ಈ ಎಲ್ಲಾ ವಿವರಗಳನ್ನು ಓದಿದ ನಂತರ, ಹೊಸ ಪಡಿತರ ಚೀಟಿ ವಿನಂತಿಯ ಮೇಲೆ ಕ್ಲಿಕ್ ಮಾಡಿ.
ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಮುಂದುವರೆಯಲು ಹೋಗಿ(GO) ಬಟನ್ ಅನ್ನು ಕ್ಲಿಕ್ ಮಾಡಿ. ನಂತರ OTP ಅಥವಾ ಫಿಂಗರ್‌ಪ್ರಿಂಟ್ ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಬೇಕು.
ಇದನ್ನು ಓದಿ: ಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್
ಆಗ, ಯಶಸ್ವಿ ಪರಿಶೀಲನೆಯ ನಂತರ ಆಧಾರ್ ಡೇಟಾವನ್ನು (Adhar details) ಪರದೆಯ ಮೇಲೆ ತೋರಿಸಲಾಗುತ್ತದೆ. ನಂತರ “ಸೇರಿಸು” ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಸಂಖ್ಯೆಯನ್ನು ಉತ್ಪಾದಿಸಲಾಗುತ್ತದೆ.
ಆ ನಂತರ, ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಿ. ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪೂರ್ಣಗೊಳಿಸಿದ ನಂತರ, ನಿಮ್ಮ ಅರ್ಜಿಯನ್ನು ಕಳುಹಿಸಲು “ಸಲ್ಲಿಸು”(Submit) ಮೇಲೆ ಕ್ಲಿಕ್ ಮಾಡಿ. ಇನ್ನು, ಕಾರ್ಡ್ ಬಂದ ಬಳಿಕ 100 ರೂ. ಪಾವತಿಸಬೇಕಾಗುತ್ತದೆ.
ಇದನ್ನು ಓದಿ: ದೇಶದ ವಿವಿಧ ಕಡೆ 10 ದಿನ ಭಾರೀ ಮಳೆ