Aadhar and Pan Card Link: ಆಧಾರ್ ಕಾರ್ಡ್ (Aadhar Card) ಮತ್ತು ಪ್ಯಾನ್ ಕಾರ್ಡ್ (Pan Card) ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದ್ದು, ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ (Link PAN Card with Aadhaar Card) ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇಲ್ಲದಿದ್ದರೆ ಏಪ್ರಿಲ್ 1 ರಿಂದ ಲಿಂಕ್ ಮಾಡದ ಅಂತವರ ಎಲ್ಲಾ ಬ್ಯಾಂಕ್ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಆದಾಯ ತೆರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇದನ್ನು ಓದಿ: Adhar Card: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಕಾರ್ಡ್ ಹೀಗೆ ಡೌನ್‌ಲೋಡ್ ಮಾಡಿ!
ಇಲ್ಲಿಯವರೆಗೂ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (Link PAN Card with Aadhaar Card) ಮಾಡದವರು ಈ ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡಲು ರೂ1000 ಸಾವಿರ ಪಾವತಿಸಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ಮತ್ತು SMS ಮೂಲಕ ಮಾಡಬಹುದು.
ಇದನ್ನು ಓದಿ: ನಿಮ್ಮ ಪ್ಯಾನ್ ಕಾರ್ಡ್ಅನ್ನು ಆಧಾರ್ ಜೊತೆ ತಕ್ಷಣವೇ ಲಿಂಕ್ ಮಾಡಿ; ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ..?
ಫೋನ್ ನಲ್ಲಿ SMS ಮೂಲಕ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ..
ಮೊದಲು ನೀವು ಈ ಸಂದೇಶವನ್ನು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ 567678 ಅಥವಾ 56161 ಸಂಖ್ಯೆಗಳಿಗೆ ಕಳುಹಿಸಬೇಕು.
ನಿಮ್ಮ ಫೋನ್‌ನಲ್ಲಿ UIDPAN ಟೈಪ್ ಮಾಡಿ ಸ್ಪೇಸ್ ನೀಡಿದ ನಂತರ, ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ.. ಒಂದು ಸ್ಪೇಸ್ ನೀಡಿ.. ತದನಂತರ 10-ಅಂಕಿಯ PAN ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ.
ಇದನ್ನು ಓದಿ: LIC ಬಿಮಾ ರತ್ನ ಪಾಲಿಸಿಯಲ್ಲಿದೆ ಮಲ್ಟಿಪಲ್ ಬೆನಿಫಿಟ್ಸ್; ಈ ಪಾಲಿಸಿಯೊಂದಿಗೆ ಕೈಗೆ ಬರೋಬ್ಬರಿ 76 ಲಕ್ಷ ರೂ..!
ಈ ಎಲ್ಲಾ ವಿವರಗಳನ್ನು ಟೈಪ್ ಮಾಡಿದ ನಂತರ 567678 ಅಥವಾ 56161 ಗೆ ಕಳುಹಿಸಿ. ಹೀಗೆ ಮಾಡುವುದರಿಂದ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುತ್ತದೆ.
ಉದಾಹರಣೆಗೆ ನಿಮ್ಮ ಆಧಾರ್ ಸಂಖ್ಯೆ 012345678901 ಆಗಿದ್ದರೆ ಮತ್ತು ಪ್ಯಾನ್ ಸಂಖ್ಯೆ ABCDE1234A ಆಗಿದ್ದರೆ. UIDPAN 012345678901 ABCDE1234A ಎಂದು ಟೈಪ್ ಮಾಡಿ ಮತ್ತು ಮೇಲೆ ತಿಳಿಸಿದ ಎರಡು ಸಂಖ್ಯೆಗಳಲ್ಲಿ ಒಂದಕ್ಕೆ ಕಳುಹಿಸಿ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!
ಗಮನಿಸಿ: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ((Link PAN Card with Aadhaar Card) ) ಮಾಡಲು ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳೆರಡರಲ್ಲೂ ಒಂದೇ ಹೆಸರನ್ನು ಹೊಂದಿರಬೇಕು. ಆ ವಿವರಗಳು ಹೊಂದಾಣಿಕೆಯಾದರೆ ಮಾತ್ರ ನಿಮ್ಮ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗುತ್ತದೆ. ಈ ಎರಡರಳ್ಳಿ ಹೆಸರು, ಜನ್ಮ ದಿನಾಂಕ, ಇತರ ವಿವರಗಳಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅಂತಹ ಕಾರ್ಡ್ ಗಳನ್ನೂ ತಿರಸ್ಕರಿಸಲಾಗುತ್ತದೆ. ಆದ್ದರಿಂದ ಮೊದಲು ಈ ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಲಿಂಕ್ ಪ್ರಕ್ರಿಯೆಯನ್ನು ಪ್ರಾರಂಭಿಸಿ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?