Saif Ali Khan hospital bill : ಚೂರಿ ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ (Saif Ali Khan) ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಅವರನ್ನು ICUನಿಂದ ವಾರ್ಡ್‌ಗೆ ವರ್ಗಾಯಿಸಲಾಗಿದ್ದು, ಗುಣಮುಖರಾಗುತ್ತಿದ್ದಾರೆ. ಅವರನ್ನು 2-3 ದಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಅಗಂತುಕನೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕೂವಿನಿಂದ ದಾಳಿ ಮಾಡಿದ್ದ. ಆರು ಬಾರಿ ಖಾನ್ಗೆ ಚುಚ್ಚಿ ಪರಾರಿಯಾಗಿದ್ದು, ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Saif Ali Khan | ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದವ ಅರೆಸ್ಟ್
ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ದ Saif Ali Khan ; ಇವರ ಆಸ್ಪತ್ರೆ ಬಿಲ್ ಎಷ್ಟು?
ಬಾಲಿವುಡ್ ನಟ ಸೈಫ್ ಅಲಿಖಾನ್ ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಇವರು ತಮ್ಮ ಆರೋಗ್ಯ ವಿಮೆ ಅಂದ್ರೆ ಹೆಲ್ತ್ ಇನ್ಸೂರೆನ್ಸ್ಗಾಗಿ ಒಟ್ಟು 35.95 ಲಕ್ಷ ಕ್ಲೇಮ್ ಮಾಡಲು ಮನವಿ ಮಾಡಿದ್ದರು.
ಈಗಾಗಲೇ ನಿವಾಬುಪಾ ಕಂಪನಿಯ ಹೆಲ್ತ್ ಇನ್ಸೂರೆನ್ಸ್ 25 ಲಕ್ಷ ರೂ.ಗೆ ಅಪ್ರೂವಲ್ ಕೊಟ್ಟಿದೆ. ಇನ್ನುಳಿದ ಹಣವನ್ನು ಚಿಕಿತ್ಸೆ ಸಂಪೂರ್ಣಗೊಂಡು ಕೊನೆಯ ಬಿಲ್ ಬಂದ ಮೇಲೆ ಕೊಡುವುದಾಗಿ ಹೇಳಿದೆ. ಸದ್ಯ ಸೈಫ್ ಹೆಲ್ತ್ ಇನ್ಸೂರೆನ್ಸ್ ಕ್ಲೇಮ್ ಮಾಡಿಕೊಂಡ ದಾಖಲೆಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಹರಿದಾಡುತ್ತಿದೆ.
ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಸೊಗಸಾಗಿ ಕಾಣಿಸಿಕೊಂಡ ಉರ್ಮಿಳಾ ಮಾತೋಂಡ್ಕರ್