PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!

Pan card Pan card

PAN card: ದೇಶದ ಜನರಿಗೆ ಕೆಲವು ಗುರುತಿನ ಚೀಟಿಗಳು ನಿರ್ಣಾಯಕವಾಗಿವೆ. ಸರ್ಕಾರ ಒದಗಿಸುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅಥವಾ ಇತರ ವಹಿವಾಟುಗಳನ್ನು ಮಾಡಲು ಕೆಲವು ದಾಖಲೆಗಳು ಅಗತ್ಯವಿದೆ. ಮೂಲಭೂತವಾಗಿ, ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಕಡ್ಡಾಯವಾಗಿದೆ. ನೀವು ಪ್ಯಾನ್ ಕಾರ್ಡ್ ಹೊಂದಿದ್ದರೆ ಮಾತ್ರ ವ್ಯವಹಾರಗಳನ್ನು ಕಾನೂನುಬದ್ಧವಾಗಿ ಮಾಡಬಹುದು.

ಪ್ಯಾನ್ ಕಾರ್ಡ್‌ನಲ್ಲಿ ಮಾಡಿದ ಪ್ರತಿಯೊಂದು ವಹಿವಾಟು ದಾಖಲೆಗಳಲ್ಲಿ ದಾಖಲಾಗುತ್ತದೆ. ಇದು ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆ ಸಂಗ್ರಹಿಸಲು ಸುಲಭವಾಗುತ್ತದೆ. ಆದರೆ, ಅಧಿಕಾರಿಗಳು ಪ್ಯಾನ್ ಕಾರ್ಡ್ನೊಂದಿಗೆ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತಾರೆ. ಇಲ್ಲದಿದ್ದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನು ಓದಿ: ರೈತರಿಗೆ ಭರ್ಜರಿ ಸಿಹಿಸುದ್ದಿ; ಈ ಯೋಜನೆಗಳಡಿ ರೈತರ ಖಾತೆಗೆ 12,000 ರೂ.!

Advertisement

ನಕಲಿ ಪ್ಯಾನ್ ಕಾರ್ಡ್ ಅಥವಾ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದರೆ ರೂ.10 ಸಾವಿರ ಭಾರೀ ದಂಡ!

Pan-card-apply
Pan-card

ಪ್ಯಾನ್ ಕಾರ್ಡ್ ಮಾಹಿತಿಯ ಆಧಾರದ ಮೇಲೆ ಸರ್ಕಾರ ತೆರಿಗೆ ಸಂಗ್ರಹಿಸುತ್ತದೆ. ಆದರೆ, ಕೆಲವರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಬಳಸಿ, ತೆರಿಗೆ ವಂಚಿಸಲು ಮತ್ತು ಸರ್ಕಾರಕ್ಕೆ ಮೋಸ ಮಾಡಲು ಹೀಗೆ ಮಾಡುತ್ತಾರೆ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇಟ್ಟುಕೊಳ್ಳುವುದು ಕಾನೂನು ಅಪರಾಧವಾಗಿದ್ದು, ದೇಶದಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪ್ಯಾನ್ ಕಾರ್ಡ್ ಇರಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ನಕಲಿ ಪ್ಯಾನ್ ಕಾರ್ಡ್ ಹೊಂದಿರುವುದು ಅಥವಾ ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಅಂಥವರಿಗೆ ಸರ್ಕಾರ ರೂ.10 ಸಾವಿರ ದಂಡ ವಿಧಿಸಲಡ್ಡು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 272B ಅಡಿಯಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್, ಭಾರೀ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಕೇವಲ ರೂ.94ಕ್ಕೆ ..!

ಒಂದೇ ಪಾನ್ ಕಾರ್ಡ್ ಹೊಂದಿರಬೇಕು..

ಸಾಮಾನ್ಯವಾಗಿ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಆದರೆ, ಕೆಲವೊಮ್ಮೆ ಅಭ್ಯರ್ಥಿಗಳು ಪ್ಯಾನ್ ಕಾರ್ಡ್‌ಗಾಗಿ ಎರಡು ಅಥವಾ ಮೂರು ಬಾರಿ ಅರ್ಜಿ ಸಲ್ಲಿಸುತ್ತಾರೆ. ಇದರಿಂದ ಕೆಲವರಿಗೆ ಎರಡು ಪಾನ್ ಕಾರ್ಡ್ ಗಳು ಸಿಗುತ್ತವೆ. ಕೆಲವೊಮ್ಮೆ ಅಧಿಕೃತ ಹೊರಗುತ್ತಿಗೆ ಏಜೆನ್ಸಿಗಳಿಂದ ಪ್ಯಾನ್ ಪಡೆಯಲು ಸಾಧ್ಯವಿದೆ. ಆದರೆ, ಅಂತಹ ಎರಡು ಕಾರ್ಡ್‌ಗಳನ್ನು ಇಟ್ಟುಕೊಳ್ಳುವುದು ಕಾನೂನು ಅಪರಾಧ. ಹಾಗಾಗಿ ಜನರು ಪ್ಯಾನ್ ಕಾರ್ಡ್ ರದ್ದುಗೊಳಿಸಬೇಕು. ಇದಕ್ಕಾಗಿ ಇನ್ನೊಂದು ಅರ್ಜಿ ಸಲ್ಲಿಸಬೇಕು. ಹೇಗೆ ಎಂದು ನೋಡೋಣ.

ಪ್ಯಾನ್ ಕಾರ್ಡ್ ರದ್ದುಗೊಳಿಸುವ ಆನ್ಲೈನ್ ​​ಪ್ರಕ್ರಿಯೆ

  • ಮೊದಲು NSDL ವೆಬ್‌ಸೈಟ್ www.onlineservices.nsdl.com ಲಾಗಿನ್ ಮಾಡಿ.
  • ಅದರ ನಂತರ ‘ಅಪ್ಲಿಕೇಶನ್ ಪ್ರಕಾರ’ (Application Type) ಕ್ಲಿಕ್ ಮಾಡಿ ಮತ್ತು‘Changes or Correction in existing PAN Data/Reprint of PAN Card (No changes in existing PAN Data)’ ಆಯ್ಕೆಯನ್ನು ಕ್ಲಿಕ್ ಮಾಡಿ, ಫಾರ್ಮ್ ಭರ್ತಿ ಮಾಡಿ ಸಲ್ಲಿಸು ಕ್ಲಿಕ್ ಮಾಡಿ.
  • ನೋಂದಣಿ ಪೂರ್ಣಗೊಂಡ ನಂತರ ಟೋಕನ್ ಸಂಖ್ಯೆಯನ್ನು ನೀಡಲಾಗುತ್ತದೆ. PAN ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮುಂದುವರಿಸಲು ಇದನ್ನು ಬಳಸಿ. ‘ಪಾನ್ ಅರ್ಜಿ ನಮೂನೆಯೊಂದಿಗೆ ಮುಂದುವರಿಸಿ’ (Continue with PAN application form) ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಪಾವತಿಯನ್ನು ನಂತರ ಪೂರ್ಣಗೊಳಿಸಬಹುದಾಗಿದ್ದು, ಈಗ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ.. ಯಾವ ಕಾರ್ಡ್ ರದ್ದುಗೊಳಿಸಬೇಕು? ಯಾವ ಕಾರ್ಡ್ ಅನ್ನು ಉಳಿಸಿಕೊಳ್ಳಬೇಕು ಎಂಬ ವಿವರಗಳನ್ನು ಸೇರಿಸಬೇಕು.

ಇದನ್ನು ಓದಿ: ಜೂನ್ ಮೊದಲ ದಿನವೇ ಭಾರೀ ಪ್ರಮಾಣದಲ್ಲಿ ಕಡಿಮೆಯಾದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಹೊಸ ದರಗಳು ಹೀಗೆವೆ!

ಪ್ಯಾನ್ ಕಾರ್ಡ್ ರದ್ದುಗೊಳಿಸುವ ಆಫ್‌ಲೈನ್ ಪ್ರಕ್ರಿಯೆ

ಆನ್‌ಲೈನ್‌ನ ಹೊರತಾಗಿ ಈ ಪ್ರಕ್ರಿಯೆಯನ್ನು ಆಫ್‌ಲೈನ್‌ನಲ್ಲಿಯೂ ಪೂರ್ಣಗೊಳಿಸಬಹುದಾಗಿದ್ದು, ಹತ್ತಿರದ NSDL ಮತ್ತು UTI ಕೇಂದ್ರಕ್ಕೆ ಭೇಟಿ ನೀಡುವ ಮೂಲಕ PAN ಕಾರ್ಡ್‌ಗೆ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಮಾಡಬಹುದು. ಕೇಂದ್ರಕ್ಕೆ ಹೋದ ನಂತರ ನಮೂನೆ 49ಎ ಭರ್ತಿ ಮಾಡಬೇಕು. ಅರ್ಜಿ ನಮೂನೆಯಲ್ಲಿ PAN ಕಾರ್ಡ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕದಂತಹ ವೈಯಕ್ತಿಕ ವಿವರಗಳನ್ನು ಸೇರಿಸಲಾಗಿದೆ.

ಇದನ್ನು ಓದಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅರ್ಜಿ ಅಹ್ವಾನ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement