ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ ಮನ್ ಗಿಲ್ ಹಾಗು ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್‌ ಮಾಡುತ್ತಿರುವ ಬಗ್ಗೆ ವದಂತಿಗಳು ಕೇಳಿಬರುತ್ತಲೇ ಇವೆ

ಇದಕ್ಕೆ ಸಾಕ್ಷಿ ಎಂಬಂತೆ ಈ ಇಬ್ಬರು ಇತ್ತೀಚಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದು ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದರು. 

ಸಾರಾ ಮತ್ತು ಶುಭ್​ಮನ್ ಗಿಲ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಮಾತನಾಡಿಲ್ಲ ಹಾಗು ಅದನ್ನು ಖಾತರಿ ಕೂಡ ಪಡಿಸಿಲ್ಲ. 

ಆದರೆ, ಸಾರಾ ಅಲಿ ಖಾನ್ ಮತ್ತು ಶುಭ್​ಮನ್ ಗಿಲ್ ಇಬ್ಬರೂ ವಿವಿಧ ಸಂದರ್ಶನಗಳಲ್ಲಿ ನಿಗೂಢ ಉತ್ತರಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. 

ಅವರ ಸಂಬಂಧದ ಬಗ್ಗೆ ಸುಳಿವು ನೀಡಿದ್ದು, ಈಗ ಗಿಲ್ ಮತ್ತು ಸಾರಾ ನಡುವಿನ ಸಂಬಂಧ ಮುರಿದುಬಿದ್ದಂತೆ ತೋರುತ್ತದೆ. 

ಹೌದು, ಸಾರಾ ಮತ್ತು ಗಿಲ್ ಇಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದು, ಅಭಿಮಾನಿಗಳ ಹದ್ದಿನ ಕಣ್ಣಿಗೆ ಈ ವಿಚಾರ ಸಿಲುಕಿದೆ. 

ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಇದು ಅವರಿಬ್ಬರ ಸಂಬಂಧದಲ್ಲಿ ಒಡಕು ಮೂಡಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

 ಗಿಲ್ ಈ ಹಿಂದೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ರೊಂದಿಗೆ ಸಂಬಂಧ ಹೊಂದಿದ್ದರು ಎಂದು ಸಹ ಹೇಳಲಾಗಿತ್ತು. 

 ಗಿಲ್ ಈ ಹಿಂದೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ರೊಂದಿಗೆ ಸಂಬಂಧ ಹೊಂದಿದ್ದರು ಎಂದು ಸಹ ಹೇಳಲಾಗಿತ್ತು. 

ಆದರೆ ಕೆಲವರು ಅವರು ಸಾರಾ ತೆಂಡೂಲ್ಕರ್ ಮತ್ತು ಸಾರಾ ಅಲಿ ಖಾನ್ ಇಬ್ಬರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ ಎಂದು ಹೇಳುತ್ತಿದ್ದಾರೆ.